ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್ | ಒಂಟೆ ಸವಾರಿ: ಸಂಭ್ರಮಿಸಿದ ಮಕ್ಕಳು

Published 20 ಜೂನ್ 2024, 15:13 IST
Last Updated 20 ಜೂನ್ 2024, 15:13 IST
ಅಕ್ಷರ ಗಾತ್ರ

ನರೇಗಲ್: ಚಲನಚಿತ್ರಗಳಲ್ಲಿ ನೋಡುತ್ತಿದ್ದ ಮರುಳುಗಾಡಿನ ಒಂಟೆಗಳನ್ನು ನರೇಗಲ್‌ ಪಟ್ಟಣದಲ್ಲಿ ಕಂಡ ಪುಟಾಣಿಗಳು ಸವಾರಿ ಮಾಡುವ ಮೂಲಕ ಸಂಭ್ರಮಿಸಿದರು.

ಗುರುವಾರ ಪಟ್ಟಣಕ್ಕೆ ಬಂದಿದ್ದ ಒಂಟೆಗಳನ್ನು ನೋಡಲು ಚಿಣ್ಣರು, ದೊಡ್ಡವರು ಮುಗಿಬಿದ್ದರು. ಚಿಕ್ಕಮಕ್ಕಳ ಒಂದು ಸುತ್ತಿನ ಸವಾರಿಗೆ ಮಾಲೀಕರು ₹35 ನಿಗದಿಪಡಿಸಿದ್ದರು.

ಒಂಟೆ ಮಾಲೀಕರಾದ ಮಹಾರಾಷ್ಟ್ರದ ಅನಿಲ, ಸಾಗರ ಜಗತಾಪ್ ಅವರು ಪುಣೆಯಿಂದ ಬಂದಿದ್ದು, ಅವರ ಪೂರ್ವಜರಿಂದಲೂ ಬಂದ ಒಂಟೆಯೊಂದಿಗೆ ಅಲೆಯುವ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.

ಪ್ರತಿವರ್ಷ ಪುಣೆಯಿಂದ ಆರಂಭವಾಗುವ ಪ್ರಯಾಣ ಸೊಲ್ಲಾಪುರ, ಬಾಗಲಕೋಟೆ, ಇಳಕಲ್ಲ, ಬದಾಮಿ, ರೋಣ, ಗದಗ, ಹುಬ್ಬಳ್ಳಿ ಸೇರಿದಂತೆ ಎಲ್ಲ ಕಡೆ ಸಂಚರಿಸುವುದಾಗಿ ಹೇಳಿದರು. ನರೇಗಲ್‌ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇನ್ನೇರಡು ದಿನ ಒಂಟೆ ಸವಾರಿ ಮಾಡಿಸಿ ಮತ್ತೆ ಮುಂದಿನ ನಗರಕ್ಕೆ ತೆರಳುವುದಾಗಿ ಹೇಳಿದರು.

ನರೇಗಲ್ ಪಟ್ಟಣದ ಜಕ್ಕಲಿ ಕ್ರಾಸ್‌ ಬಳಿ ಗುರುವಾರ ಬೆಳಿಗ್ಗೆ ಒಂಟೆ ಸವಾರಿ ಮಾಡುತ್ತಿರುವ ಮಕ್ಕಳು
ನರೇಗಲ್ ಪಟ್ಟಣದ ಜಕ್ಕಲಿ ಕ್ರಾಸ್‌ ಬಳಿ ಗುರುವಾರ ಬೆಳಿಗ್ಗೆ ಒಂಟೆ ಸವಾರಿ ಮಾಡುತ್ತಿರುವ ಮಕ್ಕಳು
ನರೇಗಲ್ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಒಂಟೆ ಸವಾರಿ ಮಾಡುತ್ತಿರುವ ಮಕ್ಕಳನ್ನು ಕೆಳಗೆ ಇಳಿಸುತ್ತಿರುವ ಪಾಲಕ
ನರೇಗಲ್ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಒಂಟೆ ಸವಾರಿ ಮಾಡುತ್ತಿರುವ ಮಕ್ಕಳನ್ನು ಕೆಳಗೆ ಇಳಿಸುತ್ತಿರುವ ಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT