ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್ | ಹೆಚ್ಚುತ್ತಿರುವ ಕಳವು ಪ್ರಕರಣ: ಜನಜಾಗೃತಿ

Published 20 ಮಾರ್ಚ್ 2024, 15:18 IST
Last Updated 20 ಮಾರ್ಚ್ 2024, 15:18 IST
ಅಕ್ಷರ ಗಾತ್ರ

ನರೇಗಲ್:‌ ಕುಟುಂಬ ಸಮೇತ ಹೊರಗೆ ಹೋಗುವಾಗ ಅಗತ್ಯವಾದಷ್ಟು ಹಣ, ವಸ್ತುಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿ, ಹೆಚ್ಚು ಮೌಲ್ಯವಾದುದನ್ನು ಬ್ಯಾಂಕ್‌ ಲಾಕರ್‌ನಲ್ಲಿಇಡಬೇಕು. ಮನೆ ಬಾಗಿಲಿಗೆ ಡೋರ್‌ ಲಾಕ್‌ ಬೀಗ ಹಾಕಬೇಕು. ಸಂಶಯಾಸ್ಪದ ವ್ಯಕ್ತಿ, ವಸ್ತು ಕಂಡಾಗ ಠಾಣೆಗೆ ತಿಳಿಸುವ ಮೂಲಕ ಅಪರಾಧ ತಡೆಗೆ ಜನರು ಸಹಕಾರ ನೀಡಬೇಕು ಎಂದು ಎಎಸ್‌ಐ ಕೆ.ಆರ್.ಬೇಲೇರಿ ಹೇಳಿದರು.

ಸ್ಥಳೀಯ ಪೊಲೀಸ್‌ ಠಾಣೆಯಿಂದ ಮನೆಕಳ್ಳತನ, ಸರಗಳ್ಳತನ ಹಾಗೂ ಅಪರಾಧ ಪ್ರಕರಣ ತಡೆಗಟ್ಟುವ ಸಲುವಾಗಿ ಮಂಗಳವಾರ ಸಂಜೆ ಪಟ್ಟಣದಲ್ಲಿ ನಡೆದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದ ವ್ಯಾಪ್ತಿಯಲ್ಲಿ ಅನೇಕ ಬಹು ರಾಷ್ಟ್ರೀಯ ಪವನ ವಿದ್ಯುತ್‌ ಉತ್ಪಾದನೆ ಮಾಡುವ ಖಾಸಗಿ ಕಂಪನಿಗಳು ಹಾಗೂ ಸೋಲಾರ ಕಂಪನಿಗಳಿವೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಿಬ್ಬಂದಿಗಳು ಮನೆ ಬಾಡಿಗೆಗಾಗಿ ಬಂದಾಗ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅಗ್ರಿಮೆಂಟ್‌ ಮಾಡುವ ಮೂಲಕ ಬಾಡಿಗೆ ನೀಡಬೇಕು. ಮಾಹಿತಿ ಇಲ್ಲದಿರುವ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕಾಗಿ ಬಾಡಿಗೆಗೆ ಕೊಟ್ಟು, ತೊಂದರೆಗೆ ಒಳಗಾಗಬಾರದು. ಅಪರಿಚತರಿಗೆ ಮನೆ ಬಾಡಿಗೆ ನೀಡುವಾಗ ಠಾಣೆಯಿಂದ ಹಿಂಬರಹವನ್ನು ಪಡೆಯಬೇಕು ಎಂದು ಎಚ್ಚರಿಕೆ ನೀಡಿದರು.

ಮನೆಗೆ ಸಿ.ಸಿ ಟಿವಿ ಕಾಮೆರಾ, ಅಲಾರಮ್‌ ಅಳವಡಿಸಿ, ಕಾಂಪೌಂಡ್‌ ಒಳಗೆ ರಾತ್ರಿ ಲೈಟ್‌ ಹಾಕಿ. ಬೈಕ್‌ ಹ್ಯಾಂಡ್‌ ಲಾಕ್‌, ಕಾರ್‌ ವೀಲ್‌ ಲಾಕ್ ಮಾಡಿರಿ‌ ಎಂದು ಸಲಹೆ ನೀಡಿದರು.

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಅಪರಾಧವನ್ನು ಹೇಗೆ ತಡೆಗಟ್ಟಬೇಕೆನ್ನುವ ಭಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ತುರ್ತು ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆಯ 112ಗೆ ಕರೆ ಮಾಡುವಂತೆ, 948002110ಗೆ ಹೆಲ್ಪ್‌ ಎಂದು ವಾಟ್ಸ್‌ಆ್ಯಪ್‌ ಮಾಡಬೇಕು ಎಂದು ಹೇಳಿದರು.

ಈ ವೇಳೆ ರಾಜು ಮಣ್ಣೊಡ್ಡರ, ಶಶಿಧರ ಸಂಕನಗೌಡ್ರ, ಕುಮಾರಸ್ವಾಮಿ ಕೋರಧಾನ್ಯಮಠ, ಹನಮಂತ ದ್ವಾಸಲ್, ಹುಲಗಪ್ಪ ಬಂಡಿವಡ್ಡರ, ಕೃಷ್ಣಪ್ಪ ಜುಟ್ಲ, ಅಲ್ತಾಪ್ ಬಾಬಣ್ಣವರ, ಇಮ್ರಾನ್ ಮಕಾನದರ, ದೊಡ್ಡನಗೌಡ ಕೊತಬಾಳ, ಎಂ. ಎಂ. ಗೋಡಿ, ಮಂಜುನಾಥ ಕಮಲಾಪುರ, ಜಿ. ಬಿ. ಕೊತಬಾಳ, ಹಸನಸಾಬ್ ಕೊತಬಾಳ, ಮುತ್ತಪ್ಪ ನೂಲ್ಕಿ ಇದ್ದರು.

ನರೇಗಲ್ ಪೊಲೀಸ್‌ ಠಾಣೆಯಿಂದ ಮನೆಕಳ್ಳತನ ಸರಗಳ್ಳತನ ಹಾಗೂ ಅಪರಾಧ ಪ್ರಕರಣ ತಡೆಗಟ್ಟುವ ಸಲುವಾಗಿ ಮಂಗಳವಾರ ಸಂಜೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ‌ ನಡೆಯಿತು
ನರೇಗಲ್ ಪೊಲೀಸ್‌ ಠಾಣೆಯಿಂದ ಮನೆಕಳ್ಳತನ ಸರಗಳ್ಳತನ ಹಾಗೂ ಅಪರಾಧ ಪ್ರಕರಣ ತಡೆಗಟ್ಟುವ ಸಲುವಾಗಿ ಮಂಗಳವಾರ ಸಂಜೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ‌ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT