ನರಗುಂದ: ರೈತ ಬಂಡಾಯ ನಡೆದು ನಾಲ್ಕು ದಶಕಗಳು ಕಳೆದಿವೆ. ದಿ.ವೀರಪ್ಪ ಕಡ್ಲಿಕೊಪ್ಪ ಹುತಾತ್ಮರಾಗಿ 45 ವರ್ಷ ಗತಿಸಿತು. ಆದರೂ ರೈತರ ವೀರಗಲ್ಲು ಖಾಸಗಿ ಜಾಗೆಯಲ್ಲಿದೆ. ಆದ್ದರಿಂದ ಆ ಜಾಗೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಅದರ ಮಾಲಿಕರನ್ನು ಒಪ್ಪಿಸುವಲ್ಲಿ ನಮ್ಮ ಸಂಘಟನೆ ಮುಂದಾಗಿದೆ. ಇದರ ಜೊತೆಗೆ ಇದರ ಪಕ್ಕದಲ್ಲೇ ಇರುವ ಖಾಸಗಿಯವರ ಜಾಗೆಯಲ್ಲಿಯೇ ರೈತ ಸ್ಮಾರಕ ನಿರ್ಮಾಣಕ್ಕೆ ಜು.21ರಂದು ಭೂಮಿ ಪೂಜೆ ನಡೆಯಲಿದೆ ಎಂದು ಕರ್ನಾಟಕ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಅಂಬಲಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ರೈತ ವೀರಗಲ್ಲು ಒಳಗೊಂಡಂತೆ ನಿರ್ಮಾಣಗೊಂಡ ಮಹದಾಯಿ ಹೋರಾಟದ ಪ್ರತ್ಯೇಕ ವೇದಿಕೆಯಲ್ಲಿ ಮಾತನಾಡಿದರು.

ಈಗಾಗಲೇ ಈ ಜಾಗೆಯ ಮಾಲಿಕರಾದ ಸಲೀಂ ಮೇಗಲಮನಿ, ದೇಸಾಯಿಗೌಡ ಪಾಟೀಲ ಅರ್ಧ ಗುಂಟೆ ಜಾಗೆಯನ್ನು ದಾನ ನೀಡುವುದಾಗಿ ಒಪ್ಪಿಗೆ ಪತ್ರವನ್ನು ತಹಶೀಲ್ದಾರ್ಗೆ ನೀಡಿದ್ದಾರೆ. ಆದ್ದರಿಂದ ಈ ಜಾಗೆಯಲ್ಲಿ ರೈತ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೆರವೇರಿಸುವರು. ಇದರಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

ರೈತ ಬಂಡಾಯ ರಾಷ್ಟ್ರದಾದ್ಯಂತ ಹೆಸರು ಮಾಡಿದೆ. ಅದರ ಕುರುಹಾಗಿ ರೈತ ವೀರಗಲ್ಲಿದೆ. ಇದರ ಜೊತೆ ನಾಲ್ಕು ದಶಕಗಳ. ಭಾವನಾತ್ಮಕ ಸಂಬಂಧವಿದೆ. ಆದ್ದರಿಂದ ಕಳೆದ ಅಕ್ಟೋಬರ್ 2, 2024ರಂದು ನಮ್ಮ ಸಂಘಟನೆ ಮೂಲಕ ರೈತರ ಸ್ಮಾರಕ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ವೀರಗಲ್ಲಿನ ಬಳಿ ಪ್ರತ್ಯೇಕ ವೇದಿಕೆ ನಿರ್ಮಿಸಿ ಉಪವಾಸ ಧರಣಿ ಆರಂಭಿಸಿ ನಿರಂತರ ಸತ್ಯಾಗ್ರಹ ಮಾಡಲಾಗಿತ್ತು. ಆಗ ಸಚಿವ ಎಚ್. ಕೆ.ಪಾಟೀಲರು ಬಂದು ಸ್ಮಾರಕ ನಿರ್ಮಾಣ ದ ಭರವಸೆ ನೀಡಿದ್ದರು. ಆಗ ಉಪವಾಸ ಕೈ ಬಿಡಲಾಗಿತ್ತು. ಅದರಂತೆ ಸೋಮವಾರ ಸಚಿವರಿಂದಲೇ ರೈತ. ಸ್ಮಾರಕ ನಿರ್ಮಾಣ ಕ್ಕೆ ಚಾಲನೆ ದೊರೆಯಲಿದೆ ಎಂದರು.

ಬಹುದಿನಗಳ ಕನಸು ನನಸಾಗುವ ಸಂತಸವಿದೆ. ಆದರೆ ರೈತರ ಬೇಡಿಕೆಗಳು ಮಾತ್ರ ಈಡೇರುತ್ತಿಲ್ಲ. ಆದ್ದರಿಂದ ಬೇಡಿಕೆಗಳಿಗೆ ಆಗ್ರಹಿಸಿ ಜು.21ರಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬಸವರಾಜಪ್ಪ ನೇತೃತ್ವದಲ್ಲಿ ಆಗಮಿಸಿ ಬೃಹತ್ ಸಮಾವೇಶ ನಡೆಸಲಿದ್ದಾರೆ ಎಂದರು.

ನಾವು ಈ ಪ್ರತ್ಯೇಕ ವೇದಿಕೆಯಲ್ಲಿ ನಿರಂತರ ಇರದಿದ್ದರೂ ನರಗುಂದದಾಚೆ ಮಹದಾಯಿ ಅನುಷ್ಠಾನ, ಬೆಳೆವಿಮೆ ಜಾರಿಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಜು.21ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆ ಎದುರು ಧರಣಿ ನಡೆಸುವ ನಿರ್ಧಾರ ಮಾಡಲಾಗಿತ್ತು. ಅವರು ಮೂರು ತಿಂಗಳು ಗಡುವು ತೆಗೆದುಕೊಂಡಿದ್ದಾರೆ. ಆದ್ದರಿಂದ ಈಗ ಅದನ್ನು ಬಿಟ್ಟು ನರಗುಂದದಲ್ಲಿಯೇ ಹುತಾತ್ಮ ರೈತ ದಿನಾಚರಣೆ ಹಾಗೂ ಸಮಾವೇಶ ನಡೆಸಲಾಗುತ್ತಿದೆ. ಬೇಡಿಕೆಗಳು ಬೇಗನೇ ಈಡೇರುವ ವಿಶ್ವಾಸ ಇದೆ ಎಂದು ಅಂಬಲಿ ಹೇಳಿದರು.

ಶಂಕರಗೌಡ ಪಾಟೀಲ, ಬಸವರಾಜ ಸಾಬಳೆ,.ವೀರಣ್ಣ ಸೊಪ್ಪಿನ, ಎಂ.ಎನ್.ಮುಲ್ಲಾ, ಪ್ರವೀಣ್ ಯರಗಟ್ಟಿ, ಶಿವಮೂರ್ತಿ,ಚನ್ನು ನಂದಿ, ಮುತ್ತುರಾಜ ಹೊಸಗೂರ ಹಾಗೂ ರೈತ ಸಂಘದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.