ಶನಿವಾರ, ಜೂನ್ 19, 2021
23 °C

ಕೋವಿಡ್‌ ಕೇರ್‌ ಸೆಂಟರ್‌ನಿಂದ ಸೋಂಕಿತ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಕೋವಿಡ್‌ ಕೇರ್‌ ಕೇಂದ್ರದಿಂದ ಒಬ್ಬ ಸೋಂಕಿತ ಶುಕ್ರವಾರ ಪರಾರಿಯಾಗಿದ್ದು, ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪರಾರಿಯಾದ ಸೋಂಕಿತನನ್ನು ಆಜಾದ್‌ ಚವ್ಹಾಣ (28) ಎಂದು ಗುರುತಿಸಲಾಗಿದ್ದು, ಬಿಹಾರದವರು ಎನ್ನಲಾಗಿದೆ. ಈತ ಸದ್ಯ ಶಿರಹಟ್ಟಿ ತಾಲ್ಲೂಕಿನ ಸದ್ಭವ ಎಂಜಿನಿಯರಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಂಕು ದೃಢಪಟ್ಟ ಕಾರಣ ಆತ ಗುರುವಾರ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಕೋವಿಡ್‌ ಕೇರ್‌ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದಾನೆ.

ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್‌ ಕೇರ್‌ ಸೆಂಟರ್‌ಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ಪರಶೀಲಿಸಿದ ನಂತರ ಪರಾರಿಯಾದ ಆಜಾದ್‌ ಚವ್ಹಾಣ (ಸದ್ಭವ ಇಂಜಿನಿಯರಿಂಗ್‌ ರೋಡ್‌ ವರ್ಕ್ಸ್‌ ಛಬ್ಬಿ) ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿರಹಟ್ಟಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು