ಶಿರಹಟ್ಟಿ: 'ದೇವಿ ಪುರಾಣ ಆಲಿಸುವುದರಿಂದ ಮಾನವನಲ್ಲಿನ ರಾಕ್ಷಸ ಗುಣಗಳು ದೂರವಾಗುತ್ತಿದ್ದು, ಮನಸ್ಸಿನ ನೆಮ್ಮದಿಗೆ ಪ್ರವಚನ ಔಷಧಿಯಾಗಬಲ್ಲದು’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಫಕೀರೇಶ್ವರ ನಗರದಲ್ಲಿ ಹಮ್ಮಿಕೊಳ್ಳಲಾದ ಬನ್ನಿ ಮಹಾಕಾಳಿದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಾತ್ಮಿಕ ಪುರಾಣ ಪ್ರವಚನಗಳು ಪ್ರತಿಯೊಬ್ಬರಿಗೂ ಜೀವನಕ್ಕೆ ಬೆಳಕು ನೀಡಬಲ್ಲವು. ದೇವಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ಪುರಾಣವೆಂದರೆ ದೇಹದ ಪುರಾಣವಿದ್ದಂತೆ. ದೇಹದಲ್ಲಿರುವ ಅವಗುಣಗಳನ್ನು ಕಳೆಯುವುದೇ ರಾಕ್ಷಸ ಸಂಹಾರವಿದ್ದಂತೆ ಎಂದರು.

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲುವ ವಿಧಾನವನ್ನು ದೇವಿ ಪುರಾಣದಲ್ಲಿ ಅತ್ಯಂತ ಅರ್ಥ ಗರ್ಭಿತವಾಗಿ ವಿವರಿಸಲಾಗಿದೆ. ಇಂತಹ ಪುರಾಣ
ಪ್ರವಚನದಿಂದ ಸನ್ಮಾರ್ಗ ಸಾಧ್ಯ. ಪುರಾಣ ಆಲಿಸಿದ ಪ್ರತಿಯೊಬ್ಬರೂ ಇದನ್ನು ಅರಿತು ಸೌಹಾರ್ದಯುತ ಜೀವನ ನಡೆಸಬೇಕು ಎಂದು ಹೇಳಿದರು.

ಪುರಾಣ ಪ್ರವಚನವನ್ನು ಮನ್ನೇರಾಳದ ಶರಣ ಬಸವ ಶಾಸ್ತೀಗಳು ನಡೆಸಿದರು. ತಬಲವಾದಕ ಶಿವಪ್ಪ ಬಂಕಾಪುರ, ಎಚ್.ಎಂ.ದೇವಗಿರಿ, ಸುರೇಶ ಕಲ್ಯಾಣಿ, ಶಿವಾನಂದ ಮುಳಗುಂದ, ಬಸವರಾಜ ತುಳಿ, ಬಿ.ಡಿ.ಪಲ್ಲೇದ ಅಶೋಕ ವರವಿ, ಶಶಿ ದೇಗಾವಿ, ಮೈಲಾರಪ್ಪ ಹಮ್ಮಿಗಿ, ಫಕಿರಪ್ಪ ತುಳಿ, ದೇವಪ್ಪ ಕಲ್ಯಾಣಿ, ಮಲಕಾಜಪ್ಪ ಮಾಗಡಿ, ಡಾ.ಮಹೇಶ ಗೊಜನೂರ, ಡಾ.ಟಿ.ಎಂ.ಮೇಂದ್ರಕರ ಸಿ.ಎಚ್.ಲಮಾಣಿ, ರಮೇಶ ಮಲಕಶೆಟ್ಟಿ, ಶರಣು ಹೊಸುರ, ಶಿವು ಹುಬ್ಬಳ್ಳಿ, ಶೇಖಪ್ಪ ಕಲ್ಯಾಣಿ, ರತ್ನಾ ಬದಿ ಸೇರಿದಂತೆ ತಾಯಂದಿರು ಮಕ್ಕಳು ಹಾಗೂ ಭಕ್ತರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.