ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ | ಶುದ್ಧ ಕುಡಿಯುವ ನೀರಿಗೆ ಬರ

ಉಮೇಶ ಬಸನಗೌಡರ
Published 20 ಡಿಸೆಂಬರ್ 2023, 5:14 IST
Last Updated 20 ಡಿಸೆಂಬರ್ 2023, 5:14 IST
ಅಕ್ಷರ ಗಾತ್ರ

ರೋಣ: ರಾಜಾಡಳಿತದ ಕಾಲದಲ್ಲಿ ಅಭಿವೃದ್ಧಿಗೆ ಹೆಸರಾಗಿ ನಾಡಿಗೆ ಕವಿ ಕಾಲಜ್ಞಾನಿಗಳನ್ನು ನೀಡಿದ ರೋಣ ತಾಲ್ಲೂಕಿನ ಸವಡಿ ಗ್ರಾಮ ಪ್ರಜಾಪ್ರಭುತ್ವದ ಯುಗದಲ್ಲಿ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿರುವುದು ಆಧುನಿಕ‌ ಪ್ರಗತಿಪರ ಸರ್ಕಾರ ಮತ್ತು ಆಡಳಿತ ವಿಕೇಂದ್ರೀಕರಣದ ತತ್ವಗಳನ್ನೇ ಅಣಕಿಸುವಂತಿದೆ.

ಸವಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜೆಜೆಎಂ ಅಡಿ ಕೊಳಾಯಿ ಅಳವಡಿಸಿ ವರ್ಷಗಳೇ ಗತಿಸಿದರು ಶುದ್ದ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ. ತಾಲ್ಲೂಕಿನ ದೊಡ್ಡ ಗ್ರಾಮಗಳ ಪೈಕಿ ಒಂದಾಗಿರುವ ಸವಡಿ ಗ್ರಾಮದಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಅದರಲ್ಲಿ ಕೇವಲ ಒಂದು ಮಾತ್ರ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಮತ್ತೆರಡು ಘಟಕಗಳು ಕೆಟ್ಟು ವರ್ಷಗಳೇ ಉರುಳಿದರೂ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸುತ್ತಿಲ್ಲ.

ಇನ್ನೂಂದು ಶುದ್ಧನೀರಿನ ಘಟಕ ಸ್ಥಾಪನೆಗೆ ಗ್ರಾಮದ ಬೂದಗೆರೆ ಹತ್ತಿರವಿ ರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಅಡಿಪಾಯ ಹಾಕಿ ವರ್ಷಗಳೆ ಕಳೆದರೂ ಅದನ್ನು ನಿರ್ಮಿಸದೇ ಕಾಲಹರಣ ಮಾಡಲಾಗು ತ್ತಿದೆ. ಸದ್ಯ ಗ್ರಾಮದ ಏಕೈಕ ಶುದ್ಧ ಕುಡಿವ ನೀರಿನ ಘಟಕ ಜನಜಂಗುಳಿ ಯಿಂದ ಕೂಡಿದ್ದು, ಶುದ್ಧ ನೀರು ಪಡೆ ಯಲು ಹರಸಾಹಸಪಡುವಂತಾಗಿದೆ.

ಗ್ರಾಮಸ್ಥರಿಗೆ ಕೊಳವೆಬಾವಿಯ ಅಶುದ್ಧವಾದ ಸವಳು ಮಿಶ್ರಿತ ನೀರನ್ನೇ ಪೂರೈಕೆ ಮಾಡಲಾಗುತ್ತಿದ್ದು ಗತಿಯಿಲ್ಲದೆ ಆ ನೀರನ್ನೆ ಬಳಸುವಂತಾಗಿದೆ. ಗ್ರಾಮದ ಪ್ರಮುಖ ಬೀದಿಯಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕೂಡಾ ಅಪೂರ್ಣವಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆ ಯಾದರೂ ಕಾಮಗಾರಿ ತ್ವರಿತಗತಿಯಲ್ಲಿ ನಡೆಯದಿರುವುದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಗೆ ಹಿಡಿದ ಕೈಗನ್ನಡಿ ಯಾಗಿದೆ. ಗ್ರಾಮದ ಒಳಗೆ ನಿರ್ಮಿಸಿರುವ ಸಿಸಿ ರಸ್ತೆಗಳು ಅವೈಜ್ಞಾನಿಕವಾಗಿದ್ದು, ಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತದೆ ಇದರಿಂದಾಗಿ ಸೊಳ್ಳೆ ಕಾಟ ವಿಪರೀತವಾಗಿದೆ.

ಸವಡಿಯಿಂದ ರೋಣ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳುಕಂಠಿಗಳು ಬೆಳೆದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಂಬಂಧಿಸಿದ ಇಲಾಖೆಯವರು ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ ಎಂದು ಗ್ರಾಮದ ಹಿರಿಯ ಮುಖಂಡ ಅಶೋಕ‌ ಪವಾಡಶೆಟ್ಟಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT