ಮಾಸ್ಟರ್ ಪ್ಲ್ಯಾನ್ ಡಿಪಿಆರ್ ಅನುಮೋದನೆ ಹಂತದಲ್ಲಿದೆ. ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಚಾರಣ ಮಾರ್ಗ ನಿರ್ಮಾಣ ಸೇರಿದಂತೆ ಇಲಾಖೆಯಿಂದ ಏನು ಮಾಡಬೇಕೋ ಅದನ್ನು ಮಾಡಲಾಗುತ್ತಿದೆ
ಸಂತೋಷ್ ಕುಮಾರ್, ಡಿಸಿಎಫ್ ಗದಗ
ಪ್ರವಾಸಿಗರ ಅನುಕೂಲಕ್ಕಾಗಿ ಕಪ್ಪತಗುಡ್ಡಕ್ಕೆ ಪ್ರತ್ಯೇಕವಾದ ವೆಬ್‌ಸೈಟ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಪ್ರವಾಸಿಗರು ಸುತ್ತಮುತ್ತಲಿನ ತಾಣಗಳನ್ನು ಅನ್ವೇಷಿಸಲು ನೆರವಾಗುವಂತಹ ಸೌಲಭ್ಯ ಕಲ್ಪಿಸಲಾಗುವುದು