ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ರೈತ ಮಲ್ಲಿಕಾರ್ಜುನಗೌಡ ಬಸನಗೌಡ ಗೋನಾಳ(46) ಅವರು ಸಾಲ ತಿರಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

ಮಹೇಂದ್ರ ಪೈನಾನ್ಸ್ನಲ್ಲಿ ₹10 ಲಕ್ಷ ಸಾಲ ಮಾಡಿ ಸ್ವರಾಜ್ ಟ್ರ್ಯಾಕ್ಟರ್ ಖರಿದಿಸಿದ್ದರು. ಕುಷ್ಟಗಿಯ ಐಡಿಎಫ್ಸಿ ಬ್ಯಾಂಕ್ನಲ್ಲಿ ₹3ಲಕ್ಷ, ಸ್ವಸಹಾಯ ಸಂಘದಲ್ಲಿ ₹1.5ಲಕ್ಷ, ದಲಾಲಿ ಅಂಗಡಿಯಲ್ಲಿ ₹2 ಲಕ್ಷ ಸಾಲ ಮಾಡಿದ್ದರು.

ಸಾಲ ತೀರಿಸಲಾಗದೆ ತಮ್ಮ ಹೊಲದ ಪಕ್ಕದಲ್ಲಿರುವ ವದೇಗೋಳ ಗ್ರಾಮದ ಮಹಾಂತಪ್ಪ ಗೊಂಗಡಶೇಟ್ಟರ್ ಎಂಬುವವರ ಹೊಲದಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.