ಮುಳಗುಂದ: ಇಲ್ಲಿನ ಹರ್ತಿ ರಸ್ತೆಯಲ್ಲಿ ಕೆಲ ದಿನಗಳಿಂದ ಭಾರೀ ವಾಹನಗಳ ಸಂಚಾರ ಮಾಡುತ್ತಿದ್ದು, ರಸ್ತೆ ಹಾಳಾಗುತ್ತಿದೆ ಎಂದು ಆರೋಪಿಸಿ ರೈತರು ಶುಕ್ರವಾರ ಟ್ರಕ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಈ ಭಾಗದ ಹೊಲಗಳಲ್ಲಿ ಗಾಳಿ ವಿದ್ಯುತ್ ಉತ್ಪಾದನೆಗೆ ಕಾಮಗಾರಿ ನಡೆಯುತ್ತಿದೆ. ಹರ್ತಿ ರಸ್ತೆ ಹೊಲದಲ್ಲಿ ಸ್ಟಾಕ್ ಯಾರ್ಡ್ ಮಾಡಿದ್ದು, ಇದಕ್ಕಾಗಿ ಭಾರೀ ಗಾತ್ರದ ಟ್ರಕ್ನಲ್ಲಿ 70-80 ಟನ್ ತೂಕದ ಕಬ್ಬಿಣದ ಕಂಬ ಹೊತ್ತು ಸಂಚಾರ ಮಾಡುತ್ತಿವೆ. ಇದರಿಂದ ರಸ್ತೆ ಹಾಳಾಗಿದ್ದು, ರೈತರ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈಗಾಗಲೇ ಕಣವಿ ರಸ್ತೆ ಹಾಳಾಗಿದೆ. ಸಂಬಂಧಪಟ್ಟ ಕಂಪನಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು.

ಸಣ್ಣ ವಾಹನಗಳ ಸಂಚಾರ ಮಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ರೈತರಿಗಾಗಿ ಇರುವ ರಸ್ತೆ ರಕ್ಷಣೆ ಮಾಡಬೇಕು ಎಂದು ರೈತ ಸಂಗಪ್ಪ ಮಟ್ಟಿ ಆಗ್ರಹಿಸಿದರು.

ರೈತರಾದ ರಾಜು ಉಜ್ಜಣ್ಣವರ, ಗಂಗಾಧರ ಬಂದಕನವರ, ಮಂಜುನಾಥ ಬಾತಾಖಾನಿ, ಮಲ್ಲಪ್ಪ ಭದ್ರಣ್ಣವರ, ಯಲ್ಲಪ್ಪ ಕಾಗಿ, ವಿರೂಪಾಕ್ಷಪ್ಪ ಕಣವಿ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.