ಶಿರಹಟ್ಟಿ: ‘ಯೂರಿಯಾ ಗೊಬ್ಬರ ಕೊರತೆ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ’ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ರವಿವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸ್ಥಳೀಯ ಪೇಟೆ ಆಂಜನೇಯ ದೇವಸ್ಥಾನದಿಂದ ಚಕ್ಕಡಿ ಮೂಲಕ ಪಾದಯಾತ್ರೆ ಪ್ರಾರಂಭಿಸಿ, ನೆಹರು ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆಯ ನಂತರ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

‘ಸಮಾಜ ಸೇವಾ ಸಂಸ್ಥೆಗಳ ಮೂಲಕ ರೈತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ರಸಗೊಬ್ಬರವನ್ನು ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ’ ಆರೋಪಿಸಿದರು.

ಪ್ರತಿಭಟನೆಯಲ್ಲಿ ಶಿರಹಟ್ಟಿ ಮಂಡಲ ಅಧ್ಯಕ್ಷ ಸುನಿಲ್ ಮಾಂತಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಹಳ್ಳಿ, ರೈತ ಮೋರ್ಚಾ ಕಾರ್ಯದರ್ಶಿ ವೀರಣ್ಣ ಅಂಗಡಿ, ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜು ಕುಲಕರ್ಣಿ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಕ್ಕೀರಪ್ಪ ಗೂಡಿ, ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷರು ನಾಗರಾಜ ಲಕ್ಕುಂಡಿ, ತಿಪ್ಪಣ್ಣ ಕೊಂಚಿಗೇರಿ, ಸಿ.ಸಿ. ನೂರಶೆಟ್ಟರ, ಸಂದೀಪ ಕಪ್ಪತ್ತನವರ, ಶಂಕರ ಮರಾಠೆ, ತಿಮ್ಮರೆಡ್ಡಿ ಮರಡ್ಡಿ, ರಾಜೀವ್ ರೆಡ್ಡಿ ಬೊಮ್ಮನಕಟ್ಟಿ, ಪ್ರವೀಣ ಪಾಟೀಲ, ಪ್ರಶಾಂತ ಗುಡದಪ್ಪನವರ, ರಾಮಣ್ಣ ಕಂಬಳಿ, ಗಂಗಾಧರ ಮೆಣಸಿನಕಾಯಿ, ಅಕ್ಬರಸಾಬ ಯಾದಗಿರಿ, ಬಸವರಾಜ ಶಾಲಿ, ಸಿದ್ದಲಿಂಗೇಶ ಅಂಗಡಿ, ಜಿ.ಆರ್. ಕುಲಕರ್ಣಿ, ಶಿವಣ್ಣ ಲಮಾಣಿ ನೆಲೋಗಲ್ಲ, ಚನ್ನವೀರಗೌಡ ಪಾಟೀಲ, ದೇವರಾಜ ಮೇಟಿ, ಆನಂದ ಗುರುನಳ್ಳಿ, ಆರ್.ಎಸ್. ಪಾಟೀಲ್, ತುಕ್ಕಪ್ಪ ಪೂಜಾರ್, ಶರಣಪ್ಪ ಹರ್ಲಾಪುರ, ಮಂಜುನಾಥ ಉಳ್ಳಾಗಡ್ಡಿ, ಸಂತೋಷ ಜಾವೂರ, ಪ್ರವೀಣ ಬೊಮಲೆ, ವಿಜಯ ಕುಂಬಾರ, ಬಸವರಾಜ ಪೂಜಾರ್, ಜಗದೀಶ್ ತೇಲಿ, ಸಂತೋಷ್ ಲಮಾಣಿ, ಫಕೀರಪ್ಪ ಕರಿಗಾರ, ಮುತ್ತಣ್ಣ ಚೋಟುಗಲ್, ಸಂಜೀವ್ ದೇಸಾಯಿ, ಮನೋಜ್ ದೇಶಪಾಂಡೆ, ವಿನೋದ್ ಕಪ್ಪತ್ತನವರ, ಸಚಿನ್ ಮೇಲ್ಮುರಿ, ಬಿ.ಡಿ.ಪಲ್ಲೇದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.