ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಗಂಬರರ ತತ್ವಾದರ್ಶ ಪಾಲಿಸಿ: ಬಾಷಾಸಾಬ ಮಲ್ಲಸಮುದ್ರ ಸಲಹೆ

Last Updated 20 ಅಕ್ಟೋಬರ್ 2021, 4:02 IST
ಅಕ್ಷರ ಗಾತ್ರ

ಗದಗ: ಪ್ರವಾದಿ ಹಜರತ್‌ ಮುಹಮ್ಮದ್ ಜಯಂತ್ಯುತ್ಸವದ ಅಂಗವಾಗಿ ಅವಳಿ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು. ಕೋವಿಡ್‌–19 ಕಾರಣದಿಂದ ಈ ಬಾರಿ ಈದ್‌ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ.

ಗದಗ ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ನಗರದ ಉರ್ದು ಸೆಂಟ್ರಲ್ ಸ್ಕೂಲ್-2, ಹಳೆ ಬಸ್ ನಿಲ್ದಾಣ ಹತ್ತಿರ ಸಿಹಿ ವಿತರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಇನ್‌ಸ್ಪೆಕ್ಟರ್‌ಗಳಾದ ಟಿ. ಮಹಾಂತೇಶ, ಪಿ.ವಿ.ಸಾಲಿಮಠ ಚಾಲನೆ ನೀಡಿದರು.

ಈದ್-ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ‘ಪೈಗಂಬರರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಹೋದರತ್ವದಿಂದ ಬಾಳಬೇಕು’ ಎಂದರು.

ಇಲಿಯಾಸ್ ಕೈರಾತಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಯೂಸೂಫ್ ನಮಾಜಿ, ಶಹಬಾಜ ಮುಲ್ಲಾ, ಕರೀಂ ಕಲಾದಗಿ, ಸಲ್ಮಾನ ಬನ್ನೂರ, ದಾದಾಪೀರ ನಾಯ್ಕರ, ಸಲ್ಮಾನ ಮುಂಡರಗಿ, ಇರ್ಷಾದ ಮಾನ್ವಿ, ಫೈಜನ್ ಖಾಜಿ, ರಫೀಕ್ ಜಮಲಖಾನ್, ಬಾಬಾಜಾನ ಬಳಗಾನೂರ ಇದ್ದರು.

ಸಿಹಿ ವಿತರಣೆ: ನಗರದ ಬ್ಯಾಂಕ್ ರೋಡ್‍ನಲ್ಲಿ ಇರುವ ಜನತಾ ಬಜಾರ್‌ನಲ್ಲಿ ‘ಡಿ ಬಾಯ್ಸ್ ಯಂಗ್ ಕಮಿಟಿ’ ಆಯೋಜಿಸಿದ್ದ ಮಹಮ್ಮದ್ ಪೈಗಂಬರರ ಜಯಂತ್ಯುತ್ಸವಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ಎನ್. ಚಾಲನೆ ನೀಡಿದರು.

ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರುಕ ಹುಬ್ಬಳ್ಳಿ, ಅನ್ವರ್‌ ಶಿರಹಟ್ಟಿ, ಮಹ್ಮದ ಶಾಲಗಾರ, ಇಮ್ತಿಯಾಜ್‌ ಮಾನ್ವಿ, ಇಬ್ರಾಹೀಂ ಸುಲೇಮಾನ, ಇಲಿಯಾಸ ಇರಕಲ್ಲ, ಸರ್ಫರಾಜ ಬಬರ್ಚಿ, ಇರ್ಫಾನ್‌ ಡಂಬಳ, ಆಶ್ಪಾಕ್ ನದಾಫ, ಜಂದಿಸಾಬ ಬಳ್ಳಾರಿ, ಅಬ್ಬಾಸ ಚಟ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT