ಗದಗ: ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮೂವರು ಸದಸ್ಯರ ನಗರಸಭಾ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಸಂಖ್ಯಾ ಬಲ ಅದಲು ಬದಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ಗದ್ದುಗೆ ಕಾಂಗ್ರೆಸ್ನತ್ತ ವಾಲಿದಂತೆ ಕಾಣಿಸುತ್ತಿದೆ.

ಇತ್ತ, ಬಿಜೆಪಿ ಸದಸ್ಯರು ನಗರಸಭೆ ಗದ್ದುಗೆ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದ್ದು ಕಾನೂನು ಹೋರಾಟ ನಡೆಸುವ ಸಿದ್ಧತೆ ಆರಂಭಿಸಿದ್ದಾರೆ. ಹೀಗಾಗಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಇನ್ನೂ ಎರಡು ವಾರಗಳ ತಡವಾಗುವ ಲಕ್ಷಣಗಳು ಗೋಚರಿಸುತ್ತಿವೆ.

‘ಬಿಜೆಪಿ ಸದಸ್ಯರ ನಗರಸಭೆ ಸದಸ್ಯತ್ವ ರದ್ದುಗೊಂಡಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರಿಗೆ ಈವರೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದಾಗಲೀ ಅಥವಾ ಜಿಲ್ಲಾಧಿಕಾರಿಯಿಂದಾಗಲೀ ಅಧಿಕೃತ ನೋಟಿಸ್ ಬಂದಿಲ್ಲ. ಅವರಿಗೆ ನೋಟಿಸ್ ಸಿಕ್ಕ ತಕ್ಷಣ ಪಕ್ಷದ ಹಿರಿಯರ ಜತೆಗೆ ಮಾತನಾಡಿ, ಕಾನೂನು ಹೋರಾಟಕ್ಕೆ ಸಿದ್ಧತೆ ಆರಂಭಿಸಲಾಗುವುದು. ಈ ವಿಷಯದಲ್ಲಿ ಕೊನೆ ಹಂತದವರೆಗೆ ಹೋರಾಟ ನಡೆಸಲಾಗುವುದು ಮತ್ತು ಅದರಲ್ಲಿ ವಿಜಯಶಾಲಿ ಆಗುತ್ತೇವೆ ಎಂಬ ವಿಶ್ವಾಸ ಕೂಡ ಇದೆ’ ಎಂದು ಬಿಜೆಪಿ ಸದಸ್ಯ ಚಂದ್ರು ತಡಸದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದಸ್ಯತ್ವ ರದ್ದಾಗಿರುವ ನೋಟಿಸ್ ಅವರಿಗೆ ತಲುಪಿದ ತಕ್ಷಣ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳು ಇವೆ’ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

‘ಬಾಸ್’ ಸೂಚಿಸಿದವರಿಗೆ ಅಧ್ಯಕ್ಷಗಿರಿ:

ಗದಗ ಬೆಟಗೇರಿ ನಗರಸಭೆಗೆ ಬಿಜೆಪಿಯಿಂದ 18 ಮಂದಿ ಆಯ್ಕೆಯಾಗಿದ್ದರು. ಈಗ ಅವರಲ್ಲಿ ಮೂವರ ಸದಸ್ಯತ್ವ ರದ್ದುಗೊಂಡಿದೆ. ಹಾಗಾಗಿ, 17 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ನಲ್ಲಿ ಉತ್ಸಾಹ ಗರಿಗೆದರಿದ್ದು, ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

‘ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ 17 ಮಂದಿಯೂ ಆಕಾಂಕ್ಷಿಗಳಿದ್ದಾರೆ. ಆದರೆ, ಯಾರು ಅಧ್ಯಕ್ಷ ಆಗಬೇಕು ಎಂಬುದನ್ನು ನಿರ್ಧಾರ ಮಾಡುವವರು ನಮ್ಮ ‘ಬಾಸ್’. ಗದಗ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮತ್ತು ಮಾಜಿ ಶಾಸಕ ಡಿ.ಆರ್.ಪಾಟೀಲ ಅವರೇ ಹೈಕಮಾಂಡ್. ಅವರು ಸೂಚಿಸಿದವರು ಅಧ್ಯಕ್ಷ, ಉಪಾಧ್ಯಕ್ಷ ಆಗುತ್ತಾರೆ’ ಎಂದು ಕಾಂಗ್ರೆಸ್ನ ಹಿರಿಯ ಸದಸ್ಯ ಎಲ್.ಡಿ.ಚಂದಾವರಿ ಹೇಳಿದರು.

‘ನೀವು ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದೀರಾ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: ‘ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಯೋಗ್ಯತೆ ಇದ್ದವರು, ಇಲ್ಲದವರೆಲ್ಲರೂ ರೇಸ್ನಲ್ಲಿ ಇದ್ದಾರೆ. ಆದರೆ, ಅದನ್ನು ನಿರ್ಧರಿಸುವವರು ಮಾತ್ರ ಹೈಕಮಾಂಡ್’ ಎಂದರು.

ಸದಸ್ಯತ್ವ ರದ್ದು; ರಾಜಕೀಯ ದುರುದ್ದೇಶ– ಆರೋಪ

‘ಗದಗ ಬೆಟಗೇರಿ ನಗರಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರಬಾರದು ಎಂಬುದು ಕಾಂಗ್ರೆಸ್ನವರ ಧೋರಣೆ. ಈ ಕಾರಣದಿಂದಲೇ ಅವರು ವಾಮಮಾರ್ಗ ಅನುಸರಿಸಿ ನಮ್ಮವರ ಸದಸ್ಯತ್ವ ಅಮಾನತು ಆಗುವಂತೆ ಮಾಡಿದ್ದಾರೆ’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಆರೋಪ ಮಾಡಿದ್ದಾರೆ.

‘ಬಿಜೆಪಿ ಅಧಿಕಾರವಧಿಯಲ್ಲಿ ಅವಳಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರು ಸಾಕಷ್ಟು ಅನುದಾನ ಒದಗಿಸಿದ್ದರು. ಅವಳಿ ನಗರ ಅಭಿವೃದ್ಧಿ ಕಾಣಬಾರದು ತಮ್ಮ ಮುಷ್ಠಿಯೊಳಗೇ ಇರಬೇಕು ಎಂಬ ದುರುದ್ದೇಶ ಇಟ್ಟುಕೊಂಡು ಕಾಂಗ್ರೆಸ್ನವರು ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆ’ ಎಂದು ದೂರಿದರು.

‘ನಕಲಿ ಠರಾವು ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ತಪ್ಪು ಮಾಡಿದ್ದಾರೆ ಎಂಬ ನಿರ್ಧಾರವನ್ನು ನ್ಯಾಯಾಲಯ ಮಾಡುತ್ತದೆ. ಪ್ರಕರಣ ಇನ್ನೂ ನ್ಯಾಲಯದಲ್ಲಿದೆ. ಸತ್ಯ ಅಥವಾ ಸುಳ್ಳು ಎಂಬುದನ್ನು ನ್ಯಾಯಾಲಯವೇ ತೀರ್ಮಾನ ಮಾಡುತ್ತದೆ’ ಎಂದು ಹೇಳಿದರು.

‘ಸದಸ್ಯತ್ವ ರದ್ದು ಮಾಡಿದ್ದಕ್ಕೆ ಸಂಬಂಧಿಸಿದಂತೆ ಆದೇಶ ತಡೆಯಾಜ್ಞೆಗಾಗಿ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಅಷ್ಟರ ಒಳಗಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅದಕ್ಕೆ ನಾವು ಬಿಡುವುದೂ ಇಲ್ಲ’ ಎಂದರು.

ಎರಡು ವಾರದೊಳಗೆ ಚುನಾವಣೆ ಘೋಷಣೆ

‘ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಫೆಬ್ರುವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡಲಾಗುವುದು’ ಎಂದು ಉಪವಿಭಾಗಾಧಿಕಾರಿ ಗಂಗಪ್ಪ ಎಂ. ತಿಳಿಸಿದ್ದಾರೆ.

‘ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ರದ್ದಾಗಿದ್ದು ಈ ಸಂದರ್ಭದಲ್ಲಿ ಚುನಾವಣೆ ನಡೆಸಬಹುದು. ಆದರೆ ಅವರು ಚುನಾವಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂದರು.

‘ಒಂದು ವೇಳೆ ಅವರು ನ್ಯಾಯಾಲಯಕ್ಕೆ ಹೋದರೆ ಅಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ಚುನಾವಣೆ ನಿಗದಿ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.