ಗಜೇಂದ್ರಗಡ: ತಾಲ್ಲೂಕಿನ ಕೆಲವು ಮುಖ್ಯರಸ್ತೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಪ್ರಯಾಣಿಕರ ಪ್ರಯಾಣದಲ್ಲಿ ಪ್ರಯಾಸವುಂಟು ಮಾಡುತ್ತಿವೆ. ಅದರಲ್ಲೂ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಈ ರಸ್ತೆಗಳಲ್ಲಿ ಸಂಚರಿಸುವುದು ದುಸ್ತರವಾಗಿದೆ.

ಸತತ ಮಳೆ, ನಿರ್ವಹಣೆ ಕೊರತೆ ಹಾಗೂ ಭಾರಿ ವಾಹನಗಳ ಓಡಾಟದಿಂದ ರಸ್ತೆಗಳ ತುಂಬ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮೃತ್ಯುಕೂಪಗಳಾಗಿ ಪರಿಣಮಿಸುತ್ತಿವೆ.

ಪಟ್ಟಣದಿಂದ ಗದಗ ಸಂಪರ್ಕಿಸುವ ರಸ್ತೆ ಕೋಟುಮಚಗಿವರೆಗೆ ಹಾಗೂ ಪಟ್ಟಣದಿಂದ ಇಳಕಲ್ಲ ಸಂಪರ್ಕಿಸುವ ರಸ್ತೆ ಮ್ಯಾಕಲಝರಿ ಗ್ರಾಮದಿಂದ ತಾಲ್ಲೂಕಿನ ಗಡಿವರೆಗೆ ಸಂಪೂರ್ಣ ಹಾಳಾಗಿವೆ.

ಗಜೇಂದ್ರಗಡ-ಕುಷ್ಟಗಿ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಗಜೇಂದ್ರಗಡ-ಗದಗ ರಸ್ತೆಯಲ್ಲಿ ಹಲವು ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಗದಗ, ಹುಬ್ಬಳ್ಳಿ ನಗರಗಳಿಗೆ ಸಂಚರಿಸುತ್ತಿದ್ದು, ರಸ್ತೆ ಗುಂಡಿಗಳಿಂದ ಮತ್ತಷ್ಟು ತೊಂದರೆಯುಂಟಾಗುತ್ತಿದೆ.

ಹದಗೆಟ್ಟ ಗ್ರಾಮೀಣ ಪ್ರದೇಶದ ರಸ್ತೆಗಳು: ಗ್ರಾಮೀಣ ಭಾಗದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಹಲವು ರಸ್ತೆಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ವಾಹನಗಳಿರಲಿ ರೈತರೂ ಸಹ ತಮ್ಮ ಹೊಲಗಳಿಗೆ ಚಕ್ಕಡಿಗಳಲ್ಲಿ ತೆರಳುವುದು ಅಸಾಧ್ಯವಾಗಿದೆ.

ತಾಲ್ಲೂಕಿನ ಬೆಣಸಮಟ್ಟಿ ಕ್ರಾಸ್-ಬೆಣಸಮಟ್ಟಿ (2 ಕಿ.ಮೀ.), ಬೆಣಸಮಟ್ಟಿ-ಕುಂಟೋಜಿ (2.50 ಕಿ.ಮೀ.), ಬೆಣಸಮಟ್ಟಿ-ಯಲಬುಣಚಿ (2 ಕಿ.ಮೀ.), ಕುಂಟೋಜಿ-ವದೇಗೋಳ (3 ಕಿ.ಮೀ.), ಸೂಡಿ-ಬೇವಿನಕಟ್ಟಿ (3 ಕಿ.ಮೀ.), ಸೂಡಿ-ಇಟಗಿ (3 ಕಿ.ಮೀ.), ಗಜೇಂದ್ರಗಡ-ಮುಧೋಳ ಒಳರಸ್ತೆ (12 ಕಿ.ಮೀ.), ಇಟಗಿ-ಗುಳಗುಳಿ (4 ಕಿ.ಮೀ.), ಕುರುಬನಾಳ ಕ್ರಾಸ್-ಚಿಕ್ಕ ಅಳಗುಂಡಿ (2 ಕಿ.ಮೀ.), ಹಿರೇ ಅಳಗುಂಡಿ-ಸೂಡಿ (4 ಕಿ.ಮೀ.), ಕಾಲಕಾಲೇಶ್ವರ-ರಾಜೂರ (4 ಕಿ.ಮೀ.), ಗಜೇಂದ್ರಗಡ-ದಿಂಡೂರ ಒಳರಸ್ತೆ (8 ಕಿ.ಮೀ.), ರಾಮಾಪೂರ-ಹೊಸ ರಾಮಾಪೂರ (3 ಕಿ.ಮೀ.), ಅಳಗುಂಡಿ-ಇಟಗಿ (5 ಕಿ.ಮೀ.), ಇಟಗಿ-ಮುಗುಳಿ (4 ಕಿ.ಮೀ.), ಅಳಗುಂಡಿ ರಸ್ತೆಯಿಂದ-ಕುರುಬನಾಳ (3 ಕಿ.ಮೀ.), ಗುಳಗುಳಿ-ಮುಶಿಗೇರಿ (4 ಕಿ.ಮೀ.), ಮಾಟರಂಗಿ-ಬಂಡಿಸೀಮೆ (3 ಕಿ.ಮೀ.), ಮಾಟರಂಗಿ ಗ್ರಾಮದಿಂದ ಗಜೇಂದ್ರಗಡ-ಕುಷ್ಟಗಿ ಮುಖ್ಯರಸ್ತೆವರೆಗೆ (3 ಕಿ.ಮೀ.) ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

ಬೆಣಸಮಟ್ಟಿ-ನಾಗರಸಕೊಪ್ಪ ತಾಂಡಾ (1.50 ಕಿ.ಮೀ.) ರಸ್ತೆ ಈವರೆಗೂ ಡಾಂಬರೀಕರಣಗೊಂಡಿಲ್ಲ. ಈ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡಬೇಕಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಜಾಲಿ ಕಂಟಿಗಳು ಬೆಳೆದಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ರಸ್ತೆ ಗುಂಡಿ ಮುಚ್ಚುವಂತೆ ಬಿಜೆಪಿಯಿಂದ ಪ್ರತಿಭಟನೆ: ಕ್ಷೇತ್ರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗಜೇಂದ್ರಗಡ-ಗದಗ ರಸ್ತೆ ತಡೆದ ಪ್ರತಿಭಟನೆ ನಡೆಸಿದ್ದರು.

ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದನ್ನು ಅರಿತ ಅಧಿಕಾರಿಗಳು ಹಿಂದಿನ ದಿನದಿಂದ ಪ್ರತಿಭಟನೆ ನಡೆಯಲಿರುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಬಳಿಕ ಅಧಿಕಾರಿಗಳು ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿ ಕೈ ತೊಳೆದುಕೊಂಡಿದ್ದಾರೆ.

ಪವನ ವಿದ್ಯುತ್ ಕಂಪನಿ ವಾಹನಗಳ ಓಡಾಟ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಂಪನಿಗಳ ನೂರಾರು ಪವನ ವಿದ್ಯುತ್ ಉತ್ಪಾದನೆ ಫ್ಯಾನ್ಗಳನ್ನು ಅಳವಡಿಸಲು ಅವುಗಳ ಬಿಡಿ-ಭಾಗಗಳನ್ನು ಭಾರಿ ಗಾತ್ರದ ವಾಹನಗಳ ಮೂಲಕ ಸಾಗಿಸಲಾಗಿದೆ. ಇದರಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ರಸ್ತೆಗಳಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಬೇಕಿದ್ದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರಿಂದ ರಸ್ತೆಗಳೆಲ್ಲ ಹಾಳಾಗಿವೆ. ಇದರಿಂದ ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನನೆಗುದಿಗೆ ಬಿದ್ದ ಕಾರವಾರ-ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆ

ಗಜೇಂದ್ರಗಡ ಪಟ್ಟಣದ ಮೂಲಕ ಹಾದು ಹೋಗುವ ಕಾರವಾರ-ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2016ರಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 2266 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು. ಕಾರವಾರ-ಕೈಗಾ-ಮುಂಡಗೋಡ-ಸವಣೂರ-ಗದಗ-ನರೇಗಲ್ಲ-ಗಜೇಂದ್ರಗಡ-ಇಲಕಲ್ಲ (318 ಕಿ.ಮೀ.) ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಅದರಂತೆ 318 ಕಿ.ಮೀ. ದ್ವಿಪಥದ ರಸ್ತೆ ನಿರ್ಮಾಣದ ಡಿಪಿಆರ್ ತಯಾರಿಸಿ ಸಲ್ಲಿಸಲಾಗಿತ್ತು. ಡಿಸೆಂಬರ್ 2019 ಮತ್ತು ಜನವರಿ 2020ರಲ್ಲಿ ಉನ್ನತೀಕರಿಸಲಾಗಿದ್ದ ಎಲ್ಲ ರಸ್ತೆ ಕಾಮಗಾರಿಗಳ ಯೋಜನಾ ವರದಿ ಮರು ಪರಿಶೀಲನೆ ನಡೆಸಲಾಗಿತ್ತು. ಆದರೆ ಕೋವಿಡ್–19 ಹಿನ್ನಲೆಯಲ್ಲಿ ಬಹುತೇಕ ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎನ್ನಲಾಗಿತ್ತು. ಕಾರವಾರ-ಇಳಕಲ್ಲ ರಸ್ತೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿದ್ದರೂ ಇಂದಿಗೂ ಕಾಮಗಾರಿ ಪ್ರಾರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಾದರೂ ಕಾರವಾರ-ಇಳಕಲ್ಲ ಹೆದ್ದಾರಿ ಕಾಮಗಾರಿಗೆ ಆರಂಭವಾಗುವುದೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಜನರು ಏನಂತಾರೆ?

ನಮ್ಮ ದುರ್ದೈವ ರೋಣ ಮತಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಳಕಪ್ಪ ಬಂಡಿ ಅವರ ಅವಧಿಯಲ್ಲಿ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ನಡೆದಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಕ್ಷೇತ್ರದಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರೀಕರಣ ಹೋಗಲಿ; ಗುಂಡಿಗಳಿಗೆ ಒಂದಿಡಿ ಮಣ್ಣು ಹಾಕಲು ಆಗುತ್ತಿಲ್ಲ. ಇದು ನಮ್ಮ ದುರ್ದೈವ.

–ಉಮೇಶ ಮಲ್ಲಾಪುರ ಅಧ್ಯಕ್ಷರು ಬಿಜೆಪಿ ರೋಣ ಮಂಡಲ ಗಜೇಂದ್ರಗಡ

ಕಾಂಗ್ರೆಸ್ಗೆ ಜನರಿಂದ ತಕ್ಕಪಾಠ ಕ್ಷೇತ್ರದ ರಸ್ತೆಗಳಲ್ಲಿ ವಾಹನಗಳ ಓಡಾಟವಿರಲಿ ಮನುಷ್ಯರೂ ಸಹ ಓಡಾಡಲು ಆಗದಂತ ಸ್ಥಿತಿಯಿದ್ದು ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸಹ ರಸ್ತೆ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕ್ಷೇತ್ರದ ಶಾಸಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

–ಉಮೇಶ ಚನ್ನು ಪಾಟೀಲ ಬಿಜೆಪಿ ಯುವ ಮುಖಂಡ ಗಜೇಂದ್ರಗಡ.

ಭಾರಿ ವಾಹನಗಳಿಂದ ರಸ್ತೆ ಹಾಳು ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಸ್ವಹಿತಾಸಕ್ತಿ ಪ್ರೇರಿತ ಪವನ ವಿದ್ಯುತ್ ಉತ್ಪಾದನಾ ಫ್ಯಾನ್ ಅಳವಡಿಸಲು ಭಾರಿ ಗಾತ್ರದ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ಸರ್ಕಾರದ ವೈಫಲ್ಯ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಕ್ಷೇತ್ರದ ರಸ್ತೆಗಳು ಸುಧಾರಣೆ ಆಗುತ್ತಿಲ್ಲ. ರಸ್ತೆ ಗುಂಡಿಗಳಿಂದ ವಾಹನ ಸವಾರರ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಕ್ಷೇತ್ರದ ಶಾಸಕರಿಗೆ ರಸ್ತೆ ಸುಧಾರಣೆ ಮಾಡಲು ಆಗದಿದ್ದರೆ ಕನಿಷ್ಠ ರಸ್ತೆ ರಸ್ತೆ ಗುಂಡಿಗಳನ್ನಾದರೂ ಪುಣ್ಯ ಕಟ್ಟಿಕೊಳ್ಳಬೇಕು.

–ಎಂ.ಎಸ್.ಹಡಪದ ಸಿಪಿಎಂ ಮುಖಂಡ ಗಜೇಂದ್ರಗಡ

ಅನುದಾನ ಬಂದಿಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಸಿಸಿ ರಸ್ತೆ ರಸ್ತೆ ಡಾಂಬರೀಕರಣ ಚರಂಡಿ ಸೇರಿದಂತೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಬರುತ್ತದೆ. ಆದರೆ ಕಳೆದ ಹಲವು ವರ್ಷಗಳಿಂದ ಅನುದಾನ ಬಂದಿಲ್ಲ. ಅಲ್ಲದೆ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

–ಮಹಾಂತೇಶ ಪೂಜಾರ ಬೆಣಸಮಟ್ಟಿ

ಅಧಿಕಾರಿಗಳು ಏನಂದ್ರು?

ರಸ್ತೆ ದುರಸ್ತಿಗೆ ಕ್ರಮ ಕ್ಷೇತ್ರದಲ್ಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 3054 ಸಿ.ಎಂ.ಜಿ.ಎಸ್.ವೈ ಯೋಜನೆ ಅಡಿಯಲ್ಲಿ ₹23.10 ಲಕ್ಷ ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೆ ಸರ್ಕಾರದಿಂದ ಮತಕ್ಷೇತ್ರಕ್ಕೆ 5054 ಯೋಜನೆ ಅಡಿಯಲ್ಲಿ ₹10 ಕೋಟಿ ಕಾಮಗಾರಿಗಳು ಈಗಾಗಲೇ ಮಂಜೂರಾಗಿದ್ದು ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿಗಳು ಶಾಸಕರಿಗೆ ನೀಡಿರುವ ₹50 ಕೋಟಿ ವಿಶೇಷ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹12 ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಮಂಜೂರಾತಿ ಹಂತದಲ್ಲಿದ್ದು ಶೀಘ್ರದಲ್ಲಿಯೇ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು

–ರಾಘವೇಂದ್ರ ಎನ್. ಪುರೋಹಿತ ಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಗದಗ

ಮಳೆಗಾಲ ಮುಗಿದ ಮೇಲೆ ಡಾಂಬರೀಕರಣ ಗಜೇಂದ್ರಗಡ-ಗದಗ ರಸ್ತೆಯಲ್ಲಿನ ದೊಡ್ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಗಜೇಂದ್ರಗಡ-ಇಳಕಲ್ ರಸ್ತೆಯಲ್ಲಿ ಮ್ಯಾಕಲಝರಿ ಗ್ರಾಮದ ಹತ್ತಿರದ 850 ಮೀ. ರಸ್ತೆ ದುರಸ್ತಿಯಲ್ಲಿರುವುದು ಗಮನಕ್ಕೆ ಬಂದಿದೆ. ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಆಗಿದೆ. ಮಳೆಗಾಲ ಸಂಪೂರ್ಣ ಮುಗಿದ ನಂತರ ರಸ್ತೆ ಡಾಂಬರೀಕರಣ ಪ್ರಾರಂಭಿಸಲಾಗುವುದು.

-ಗುರನಗೌಡ ಪಾಟೀಲ ಎಇಇ ಲೋಕೋಪಯೋಗಿ ಇಲಾಖೆ ರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.