ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ಗಣೇಶ ಚತುರ್ಥಿ: ಸಿಸಿ ಕ್ಯಾಮೆರಾ ಅಳವಡಿಕೆ

Published 14 ಸೆಪ್ಟೆಂಬರ್ 2023, 15:56 IST
Last Updated 14 ಸೆಪ್ಟೆಂಬರ್ 2023, 15:56 IST
ಅಕ್ಷರ ಗಾತ್ರ

ಮುಂಡರಗಿ: ಗಣೇಶ ಚತುರ್ಥಿಗೆ ಸುದೀರ್ಘ ಇತಿಹಾಸವಿದೆ. ಎಲ್ಲ ಧರ್ಮದವರು ಒಟ್ಟಾಗಿ ಸೇರಿ ಸಾಮರಸ್ಯದಿಂದ ಹಬ್ಬ ಆಚರಿಸಬೇಕು’ ಎಂದು ಸಿಪಿಐ ಮಂಜುನಾಥ ಕುಸಗಲ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಅಹಿತರಕ ಘಟನೆಗಳನ್ನು ತಡೆಯಲು ಸ್ಥಳೀಯ ಪ್ರಮುಖ ಭಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ವಾರ್ಡ್‍ಗೆ ಕೇವಲ ಒಂದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು.

ಪಿಎಸ್‍ಐ ಸುಮಾ ಗೊರಬಾಳ ಮಾತನಾಡಿ, ಹಬ್ಬ ಆಚರಿಸುವ ಕುರಿತಂತೆ ಸರ್ಕಾರ ಹಲವು ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಶಾಂತಿ, ಸುವ್ಯವಸ್ಥೆಗೆ ಭಂಗ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಯಲ್ಲಪ್ಪ ಗಣಾಚಾರಿ, ಮಂಜುನಾಥ ಮುಧೋಳ, ಬಸವರಾಜ ನವಲಗುಂದ, ಅಡಿವೆಪ್ಪ ಚಲವಾದಿ, ಹಾಲಪ್ಪ ಅರಹುಣಸಿ, ಸುಲೆಮಾನ್ ಬೇವೂರ ಮಾತನಾಡಿದರು.

ಗಣೇಶ ಹಾತಲಗೇರಿ, ಲಕ್ಷ್ಮಣ ತಗಡಿನಮನಿ, ಶ್ರೀನಿವಾಸ ಕೊರ್ಲಗಟ್ಟಿ, ಮನೋಜ ರಾಠೋಡ್, ಪವನ ಲೇಡ್ವೆ, ಹೆಸ್ಕಾಂ ಎಇಇ ಚನ್ನಪ್ಪ ಲಮಾಣಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT