ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ | ಗಂಗಾದೇವಿ ಜಯಂತಿ: ಮೆರವಣಿಗೆ

Published 16 ಜೂನ್ 2024, 13:53 IST
Last Updated 16 ಜೂನ್ 2024, 13:53 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಭಾನುವಾರ ಗಂಗಾಮತ ಸಮಾಜದ ವತಿಯಿಂದ ಗಂಗಾದೇವಿ ಜಯಂತಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಗಂಗಾ ಪರಮೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಡಾ.ಚಂದ್ರು ಲಮಾಣಿ, ‘ಗಂಗಾಮತ ಸಮಾಜ ಸಣ್ಣದಿದ್ದರೂ, ಸಮಾಜದ ಎಲ್ಲರೂ ಕೂಡಿ ಗಂಗಾದೇವಿಯ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಗಂಗಾಮತ ಸಮಾಜದವರು ಮಕ್ಕಳಿಗೆ ತಪ್ಪದೇ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಬೇಕು’ ಎಂದರು.

ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಗಂಗಾಮತ ಸಮಾಜದ ಅಧ್ಯಕ್ಷ ಭರಮಪ್ಪ ಕಟ್ಟಿಮನಿ, ಸೋಮಪ್ಪ ಸುಣಗಾರ, ಮಹದೇವಪ್ಪ ಕಟ್ಟಿಮನಿ, ಮಹಾಂತೇಶ್ ಶಿಗ್ಲಿ, ಸೋಮಪ್ಪ ತಂಡಿಗೇರ, ಹನುಮಂತಪ್ಪ ಅಡಿವಪ್ಪನವರ, ಗಂಗಾಧರ ತಂಡಿಗೇರ, ರಮೇಶ ರಿತ್ತಿ, ಮೌನೇಶ ಬಡಿಗೇರ, ನಾಗರಾಜ ಸುಣಗಾರ, ರಾಜು ಸುಣಗಾರ, ಮಾಲತೇಶ ತಂಡಿಗೇರ, ಮುತ್ತು ಸುಣಗಾರ, ಆಕಾಶ ಸವದತ್ತಿ, ನಾಗರಾಜ ಮಳಗಿ, ಈಶ್ವರ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT