ಗದಗ: ಗೃಹಸಚಿವ ಡಾ. ಜಿ.ಪರಮೇಶ್ವರ್ ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ಆರು ತಿಂಗಳಲ್ಲಿ ಗದಗ ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆ ಮಾಡಬೇಕು’ ಎಂಬ ಟಾಸ್ಕ್ ಅನ್ನು ಪೊಲೀಸರಿಗೆ ನೀಡಿದ್ದರು. ಆ ಗುರಿ ಸಾಧಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಡ್ರಗ್ಸ್ ಜಾಲ ಬೇರು ಸಮೇತ ಕಿತ್ತುಹಾಕಲು ಕಠಿಣ ಕ್ರಮವಹಿಸಿದ್ದಾರೆ.

2025ನೇ ಸಾಲಿನಲ್ಲಿ ಗದಗ ಜಿಲ್ಲೆಯಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಗೆ (ಎನ್ಡಿಪಿಎಸ್) ಸಂಬಂಧಿಸಿದ 32 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಪತ್ತೆ ಹಚ್ಚಿ 21 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

2025ರಲ್ಲಿ ದಾಖಲಾದ ಪ್ರಕರಣಗಳ ಪೈಕಿ 19 ಗಾಂಜಾ ಸೇವನೆ ಪ್ರಕರಣಗಳಿವೆ. ಉಳಿದ 12 ಪ್ರಕರಣಗಳು ಗಾಂಜಾ ಮಾರಾಟ ಮತ್ತು ಸಾಗಣೆಗೆ ಸಂಬಂಧಿಸಿದವು. 32 ಪ್ರಕರಣಗಳಲ್ಲಿ ₹8.86 ಲಕ್ಷ ಮೌಲ್ಯದ 6.50 ಕೆ.ಜಿ. ಗಾಂಜಾ ವಶಪಡಿಸಿಕೊಂಡು, ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2024ನೇ ಸಾಲಿನಲ್ಲಿ ಎನ್ಡಿಪಿಎಸ್ ಅಡಿ ಜಿಲ್ಲೆಯಲ್ಲಿ 23 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 11 ಗಾಂಜಾ ಸೇವನೆ ಪ್ರಕರಣಗಳು ಹಾಗೂ 12 ಗಾಂಜಾ ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. ಕಳೆದ ವರ್ಷ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಗಾಂಜಾ ವ್ಯಸನಿಗಳು, ಮಾರಾಟಗಾರರ ಮೇಲೆ ನಿಗಾ: ಗದಗ ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳು ಮತ್ತು ಮಾರಾಟಗಾರರು ಸೇರಿದಂತೆ ಒಟ್ಟು 114 ಮಂದಿ ಎಂಒಬಿಗಳು ಇದ್ದಾರೆ. ಒಬ್ಬೊಬ್ಬನಿಗೆ ಒಬ್ಬ ಪೊಲೀಸ್ ಸಿಬ್ಬಂದಿ ನೇಮಿಸಿ, ಪ್ರತಿ ಗುರುವಾರ ಅವರನ್ನು ತಪಾಸಣೆ ಒಳಪಡಿಸಲಾಗುತ್ತಿದೆ.

ಗಾಂಜಾ ಸೇವನೆ ಮಾಡುವವನ ಮೂತ್ರ ಪರೀಕ್ಷೆ ಮಾಡಿ, ವರದಿ ಪಾಸಿಟಿವ್ ಬಂದರೆ ಅವನ ಮೇಲೆ ಮತ್ತೊಂದು ಪ್ರಕರಣ ದಾಖಲಿಸಲಾಗುತ್ತಿದೆ. ಅದೇರೀತಿ, ಗಾಂಜಾ ಸಾಗಣೆ ಪ್ರಕರಣದಲ್ಲಿ ಭಾಗಿಯಾದವರ ಮೇಲೂ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ.

ಹೊರ ರಾಜ್ಯದಿಂದ ಗಾಂಜಾ ಪೂರೈಕೆ: 2023ರಲ್ಲಿ ದಾಖಲಾದ ಒಂದು ಪ್ರಕರಣವನ್ನು ಹೊರತು ಪಡಿಸಿದರೆ, ಗದಗ ಜಿಲ್ಲೆಯಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುವ ಪ್ರಕರಣಗಳು ಈವರೆಗೆ ಪತ್ತೆಯಾಗಿಲ್ಲ.

ಗದಗ ಜಿಲ್ಲೆಗೆ ಗೋದಾವರಿ, ಒಡಿಶಾ ಭಾಗದಿಂದ ರೈಲ್ವೆ ಮಾರ್ಗದ ಮೂಲಕ ಗಾಂಜಾ ಪೂರೈಕೆ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 2025ರಲ್ಲಿ ರೈಲ್ವೆ ಪೊಲೀಸ್ನಲ್ಲೂ ಮೂರು ಗಾಂಜಾ ಪ್ರಕರಣಗಳು ಪತ್ತೆಯಾಗಿವೆ.

ಗಾಂಜಾ ಜಾಲ ಪತ್ತೆಗೆ ಬಿಗಿ ಕ್ರಮ: ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಿದ್ದು ಪ್ರತಿ ತಿಂಗಳು ಎನ್–ಕಾರ್ಡ್ ಸಭೆ ನಡೆಸುತ್ತಿದೆ. ಇದರಲ್ಲಿ ಸರ್ಕಾರದ 20ಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು, ಎನ್ಜಿಒಗಳು, ಖಾಸಗಿ ವ್ಯಕ್ತಿಗಳು ಭಾಗವಹಿಸುತ್ತಾರೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪರಸ್ಪರ ಸಹಕಾರದ ಬಗ್ಗೆ ಚರ್ಚಿಸಲಾಗುತ್ತಿದೆ.

ಗಾಂಜಾ ಸೇವಿಸುವ ವ್ಯಕ್ತಿಗಳು ವೈದ್ಯರ ಬಳಿ ತಪಾಸಣೆಗೆ ಹೋದರೆ ವೈದ್ಯರು ಪೊಲೀಸರಿಗೆ ಮಾಹಿತಿ ಕೊಡುತ್ತಾರೆ. ಖಿನ್ನತೆಗೆ ಒಳಗಾದ ವ್ಯಕ್ತಿಗಳ ಕುರಿತಾದ ಮಾಹಿತಿಯನ್ನು ಎನ್ಜಿಒಗಳು ಒದಗಿಸುತ್ತಿವೆ.

ಸಿಂಥೆಟಿಕ್ ಡ್ರಗ್ ಪ್ರಕರಣಗಳಿಲ್ಲ: ಗದಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೊರತುಪಡಿಸಿದರೆ ಮತ್ತಿನ್ಯಾವುದೇ ಡ್ರಗ್ಸ್ ಪ್ರಕರಣಗಳು ದಾಖಲಾಗಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ತೆಯಾದಂತಹ ಮಾದರಿಯ ಡ್ರಗ್ಸ್ ಫ್ಯಾಕ್ಟರಿಗಳೂ ಜಿಲ್ಲೆಯಲ್ಲಿ ಇಲ್ಲ.

ಕೊಕೇನ್, ಹೆರಾಯಿನ್ ಇವೆಲ್ಲವೂ ಅಂತರರಾಷ್ಟ್ರೀಯ ಡ್ರಗ್ಗಳು. ನಿರ್ದಿಷ್ಟ ಕೆಮಿಕಲ್ ಬಳಸಿ ತಯಾರಿಸುವ ಸಿಂಥೆಟಿಕ್ ಡ್ರಗ್ ಪ್ರಕರಣಗಳು ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿಲ್ಲ. ವೈದ್ಯರ ಔಷಧಿ ಚೀಟಿ ಇಲ್ಲದೇ ಕೊಡುವ ಎಚ್ ಡ್ರಗ್ ಪ್ರಕರಣಗಳ ಮೇಲೂ ನಿಗಾವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗೃತಿ ಕಾರ್ಯಕ್ರಮ: ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದ್ದಾರೆ. 2024ರಲ್ಲಿ 138 ಹಾಗೂ 2025ರಲ್ಲಿ 364 ಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ. ಶಾಲಾ ಕಾಲೇಜು, ಸಂತೆ, ಬಸ್ ನಿಲ್ದಾಣ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲೆಲ್ಲಾ ಡ್ರಗ್ಸ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಸಾರ್ವಜನಿಕರ ಸಹಕಾರವೂ ಬೇಕು: ಗದಗ ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ಸಾರ್ವಜನಿಕರ ಸಹಕಾರವೂ ಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲೇ ಗಾಂಜಾ ಸಾಗಣೆ, ಸೇವನೆ ಪ್ರಕರಣಗಳು ನಡೆಯುತ್ತಿದ್ದರೂ ಆ್ಯಪ್ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ.

ಗೂಗಲ್ ಪ್ಲೇಸ್ಟೋರ್ನಲ್ಲಿ ‘ಕರ್ನಾಟಕ ಡ್ರಗ್ ಫ್ರೀ ಆ್ಯಪ್’, ‘ಡ್ರಗ್ ಮ್ಯಾಪ್’ ಎಂಬ ಆ್ಯಪ್ಗಳಿದ್ದು ಇವುಗಳನ್ನು ಡೌನ್ಲೋಡ್ ಮಾಡಿಕೊಂಡು, ಮಾಹಿತಿಯನ್ನು ಪೊಲೀಸರಿಗೆ ತಲುಪಿಸಬಹುದು. ಮಾಹಿತಿದಾರರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು. ಸಿಕ್ಕ ಮಾಹಿತಿ ಆಧಾರದ ಮೇಲೆ ಸುಮೊಟೊ ಪ್ರಕರಣ ದಾಖಲಿಸಿ, ಗಾಂಜಾ ಮಾರಾಟ ಪ್ರಕರಣಗಳ ತಡೆಗೆ ಕ್ರಮವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎನ್ಡಿಪಿಎಸ್ಗೆ ಸಂಬಂಧಿಸಿದಂತೆ 2024ಕ್ಕಿಂತ 2025ರಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಗಾಂಜಾ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು
-ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಅಡಿ ಪದೇ ಪದೇ ಸಿಕ್ಕಿಬೀಳುವ ವ್ಯಕ್ತಿಗಳ ಮೇಲೆ ‘ಫಿಟ್–ಎನ್ಡಿಪಿಎಸ್’ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು
-ಮಹಾಂತೇಶ ಸಜ್ಜನರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.