ಲಕ್ಷ್ಮೇಶ್ವರ: ಗೌರಿ ಹುಣ್ಣಿಮೆ ಬಂದರೆ ಸಾಕು ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಹುಣ್ಣಿಮೆ ಸಂಭ್ರಮ, ಸಡಗರ ಗರಿಗೆದರುತ್ತದೆ.

ತಾಲ್ಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗೌರಿ ಹುಣ್ಣಿಮೆ ಆಚರಣೆ ವಿಶಿಷ್ಟವಾಗಿದ್ದು, ಎರಡು ದಿನ ಹುಣ್ಣಿಮೆ ಆಚರಿಸಲಾಗುತ್ತದೆ. ಗ್ರಾಮ ದೇವತೆ ದೇವಸ್ಥಾನದ ಪಕ್ಕದಲ್ಲಿ ಗೌರಮ್ಮ ದೇವಿ ಪ್ರತಿಷ್ಠಾಪಿಸಿ ಆರಾಧಿಸುವರು. ಹುಣ್ಣಿಮೆಯ 4 ದಿನಕ್ಕೂ ಮೊದಲೇ ಗ್ರಾಮದ ಬಾಲಕಿಯರು ದೇವಸ್ಥಾನಕ್ಕೆ ಬಂದು ಆರತಿ ಬೆಳಗುವರು. ಹುಣ್ಣಿಮೆಯ ಸಂಜೆ ಗ್ರಾಮದ ಮಹಿಳೆಯರು ಗೌರಿ ಹಾಡುಗಳನ್ನು ಹಾಡುತ್ತ ಗೌರಮ್ಮ ದೇವಿಗೆ ಸಕ್ಕರೆ ಆರತಿ ಬೆಳಗುವರು. ಮರುದಿನ ರಾತ್ರಿ ಗೌರವ್ವನ ಗುಗ್ಗಳ ಸೇವೆ ಅದ್ದೂರಿಯಾಗಿ ಜರುಗುವುದು.

ತಾಲ್ಲೂಕಿನಾದ್ಯಂತ ಬುಧವಾರ ಗೌರಿ ಹುಣ್ಣಿಮೆ ಆಚರಣೆ ಕಳೆಗಟ್ಟಿತ್ತು. ಸಂಜೆ ಮಹಿಳೆಯರು, ಬಾಲಕಿಯರು ಸಕ್ಕರೆ ಆರತಿ ಗೌರವ್ವ ದೇವಿಗೆ ಬೆಳೆಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.