ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಆಗುವುದರೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ನಮ್ಮ ಹೋರಾಟ ಸರ್ಕಾರಕ್ಕೆ ನಡುಕ ಹುಟ್ಟಿಸುವುದು
ನಿಶ್ಚಿತ ಹನುಮಂತಗೌಡ ಕಲ್ಮನಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ
ಅತಿಥಿ ಉಪನ್ಯಾಸಕರು 10ಕ್ಕೂ ಹೆಚ್ಚು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದಾರೆ. ಆದರೆ ಸರ್ಕಾರ 6 ಸಾವಿರ ಮಂದಿ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಕೌನ್ಸೆಲಿಂಗ್ ನಡೆಸುತ್ತಿದೆ. ತಕ್ಷಣವೇ ಈ ಪ್ರಕ್ರಿಯೆ ನಿಲ್ಲಿಸಿ ನಮ್ಮನ್ನು ಮುಂದುವರಿಸಬೇಕು
ಚಂದ್ರಕಾಂತೆ ಶಿರೋಳೆ ಕಲಬುರಗಿಯ ಅತಿಥಿ ಉಪನ್ಯಾಸಕ
ದಯಾಮರಣದ ಪತ್ರ ಸಲ್ಲಿಕೆ
‘ವಿದ್ಯಾರ್ಥಿಗಳ ಭವಿಷ್ಯ ಕಟ್ಟುವವರಾದರೂ ಈಗ ನಮ್ಮ ಬದುಕು ಬೀದಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉನ್ನತ ಶಿಕ್ಷಣ ಸಚಿವ ಸುಧಾಕರ್ ನಮ್ಮ ಹೋರಾಟಕ್ಕೆ ಸ್ಪಂದಿಸಿ ನೆರವಿಗೆ ನಿಲ್ಲುತ್ತಾರೆ ಎಂಬ ಆಶಾಭಾವನೆಯಿಂದ ಏಳು ದಿನಗಳ ಕಾಲ ಕಾಯ್ದೆವು. ಆದರೆ ಅವರು ಈವರೆಗೆ ನಮ್ಮತ್ತ ಕಣ್ಣೆತ್ತಿ ಸಹ ನೋಡಿಲ್ಲ. ಆದಕಾರಣ ಕುಟುಂಬದ ಸಮೇತವಾಗಿ ದಯಾಮರಣ ಕೋರಿ ಸರ್ಕಾರಕ್ಕೆ ಪತ್ರ ಸಲ್ಲಿಸುತ್ತಿದ್ದೇವೆ’ ಎಂದು ಹೊನ್ನಾಳಿಯ ಅತಿಥಿ ಉಪನ್ಯಾಸಕ ಹಲದಪ್ಪ ಹೇಳಿದರು.