ಗದಗ: ‘ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಸೇವೆ ದೇಶದ ವಿದ್ಯುನ್ಮಾನ ಹಣಕಾಸು ವಹಿವಾಟು ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ’ ಎಂದು ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.

ಭಾರತೀಯ ಅಂಚೆ ಇಲಾಖೆ ಆಶ್ರಯದಲ್ಲಿ ಸೋಮವಾರ ನಡೆದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಟನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಐಪಿಪಿಬಿಯಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅಂಚೆ ಇಲಾಖೆ ಸೇವೆ ತಲುಪಿಸುವ ಸದಾವಕಾಶ ಲಭಿಸಿದೆ. ಕೇವಲ ಏಳು ವರ್ಷಗಳಲ್ಲಿ ದೇಶದ 12 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದೆ. ಇದರಿಂದಾಗಿ ಐಪಿಪಿಬಿ ಬ್ಯಾಂಕ್ 155 ಲಕ್ಷ ಕೌಂಟರ್ ಸೇವೆ ಜತೆಗೆ ಡಿಜಿಟಲ್ ಮತ್ತು ಕ್ಯಾಶ್ಲೆಸ್ ವ್ಯವಹಾರ ನೀಡಿದ ಸಾಧನೆ ತೋರಲು ಸಾಧ್ಯವಾಗಿದೆ. ಹೀಗಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಜಪಾನ್, ಚೀನಾ ದೇಶ ನಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದರು.

‘ಮುಂಬರುವ ದಿನಗಳಲ್ಲಿ ಜನಸ್ನೇಹಿ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಲು ಗದಗ ಅಂಚೆ ವಿಭಾಗ ಪ್ರಾಮಾಣಿಕ ಪಯತ್ನ ತೋರಿಸಬೇಕು’ ಎಂದು ಸಲಹೆ ನೀಡಿದರು.

ಪ್ರಧಾನ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ಮಾತನಾಡಿ, ‘ಅಂಚೆ ಇಲಾಖೆ ಸಿಬ್ಬಂದಿಯ ಶ್ರಮದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಐಪಿಪಿಬಿ ಸಾಧನೆ ತೋರಲು ಸಾಧ್ಯವಾಗಿದೆ’ ಎಂದರು.

‘ಕೇಂದ್ರ ಸರ್ಕಾರ ತನ್ನ ಮಹತ್ವದ ಯೋಜನೆಗಳನ್ನು ದೇಶದೆಲ್ಲೆಡೆ ಪರಿಚಯಿಸಲು ಅಂಚೆ ಇಲಾಖೆ ಜತೆಗೆ, ಐಪಿಪಿಬಿ ಜೋಡಿಸಿ ಕೆಲಸ ಆರಂಭಿಸಿದ್ದರಿಂದಾಗಿ ಅಂಚೆ ವ್ಯವಹಾರ ಸರಳೀಕರಣಗೊಂಡಿದೆ. ಜತೆಗೆ ವೇಗವಾಗಿ ಜನರಿಗೆ ಹಣಕಾಸು ಸೇವೆ ನೀಡಲು ಸಹಕಾರಿಯಾಗಿದೆ’ ಎಂದರು.

ಐಪಿಪಿಬಿ ಗದಗ ವಿಭಾಗದ ವ್ಯವಸ್ಥಾಪಕ ಆನಂದ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಅಂಚೆ ಅಧೀಕ್ಷಕ ವಿ. ಸುನೀಲಕುಮಾರ, ಡಿ.ಜಿ. ಮ್ಯಾಗೇರಿ, ಶರಣಪ್ಪ ನಾಯ್ಕರ, ನಿಂಗಪ್ಪ ಹೂಗಾರ, ಶರಣಯ್ಯ ಹಿರೇಮಠ, ಸಿದ್ದಲಿಂಗೇಶ ಯಂಡಿಗೇರಿ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ರವಿ ಜಾಧವ, ಮಂಜುಳಾ ಕಡಿಯವರ, ವೆಂಕಪ್ಪ ಗುಗ್ಗರಿ, ವಾಣಿ ಮಾಂಡ್ರೆ, ಸರೋಜ ಪಟ್ಟಣಶೆಟ್ಟಿ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ, ಐಪಿಪಿಬಿ ಸಿಬ್ಬಂದಿ ಜಾವಿದ್ ಜಿ., ಗುಳಪ್ಪ ಕುಂಬಾರ ಸೇರಿದಂತೆ ಪ್ರಧಾನ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಶಿವರಾಜ ಕೆ. ವಂದಿಸಿದರು.

ಮನೆಬಾಗಿಲಿಗೆ ಅಂಚೆ ಸೇವೆ

‘ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸಮಾಡುತ್ತಿದೆ’ ಎಂದು ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಹೇಳಿದರು. ‘ಅಂಚೆ ಇಲಾಖೆಯು ಅಪಘಾತ ವಿಮೆ ಆರೋಗ್ಯ ವಿಮೆ ಮತ್ತು ಮಕ್ಕಳ ವಿಮಾ ಯೋಜನೆಗಳನ್ನೂ ನೀಡುತ್ತದೆ. ಈ ಯೋಜನೆಗಳು ಕಡಿಮೆ ಪ್ರೀಮಿಯಂ ದರಗಳಲ್ಲಿ ಸಾಕಷ್ಟು ಉಪಯುಕ್ತವಾಗಿವೆ. ಅವುಗಳನ್ನು ಗ್ರಾಹಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ತೋರಬೇಕು. ಅಂದಾಗ ಮಾತ್ರ ನಮ್ಮ ಇಲಾಖೆಯ ಸಾಧನೆ ದೇಶದೆಲ್ಲೆಡೆ ಪ್ರಚಾರಗೊಳ್ಳುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.