ಮುಂಡರಗಿ: ಸಾರ್ವತ್ರಿಕ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡು ಹಿಡಿಯುವ ಮೂಲಕ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರಕ್ಷತಾ ಅಂದಾನಶೆಟ್ಟರ ಚುರ್ಚಿಹಾಳ ಜೂನ್ 21ರವರೆಗೆ ಜಪಾನ್ನಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಶಾಲೆಯ ಬಿಸಿಯೂಟ ವಿತರಣೆ, ಸಾರ್ವಜನಿಕ ಸಭೆ, ಸಮಾರಂಭ, ಧಾರ್ಮಿಕ ಉತ್ಸವ, ಸಾಮೂಹಿಕ ಭೋಜನ ಮೊದಲಾದ ಸಂದರ್ಭಗಳಲ್ಲಿ ಬೃಹತ್ ಪಾತ್ರೆಗಳಲ್ಲಿ ಅಡುಗೆ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಪಾತ್ರೆಗಳನ್ನು ಅಡುಗೆ ಮನೆಯಿಂದ ವಿತರಣೆಯ ಸ್ಥಳದವರೆಗೆ ಕೊಂಡೊಯ್ಯುವುದು ಕಷ್ಟದ ಕೆಲಸವಾಗಿದೆ. ಅದರಲ್ಲಿಯೂ ಶಾಲೆಗಳ ಬೃಹತ್ ಪಾತ್ರೆಗಳಲ್ಲಿ ತಯಾರಿಸುವ ಬಿಸಿಯೂಟ ಸಾಗಾಣಿಕೆಯು ಸವಾಲಿನ ಕೆಲಸವಾಗಿದ್ದು, ಅನೇಕ ಸಂದರ್ಭಗಳಲ್ಲಿ ಅಪಘಡಗಳು ಸಂಭವಿಸಿವೆ.

ಈ ಸಮಸ್ಯೆಯನ್ನು ನಿವಾರಿಸುವ ಕುರಿತು ವಿದ್ಯಾರ್ಥಿನಿ ರಕ್ಷತಾ, ‘ಹಾಟ್ ವೆಸಲ್ ಕ್ಯಾರಿಯರ್ ಕಿಟ್’ ಎಂಬ ಒಂದು ಸುಲಭ ಮಾದರಿಯನ್ನು ತಯಾರಿಸಿದ್ದು, ಅದು ಜಪಾನಿನಲ್ಲಿ ಪ್ರದರ್ಶನಗೊಳ್ಳಲಿದೆ. ಅದು ಅಡುಗೆ ಸಾಗಣೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲಿದೆ. ಜೊತೆಗೆ ಎಲ್ಲರೂ ಸುಲಭವಾಗಿ ಅದನ್ನು ಸ್ಥಳೀಯವಾಗಿಯೇ ತಯಾರಿಸಬಹುದಾಗಿದೆ.

ಮಾದರಿ ವಿವರ: ರಕ್ಷತಾ ಅವರು 2 ಬೈಕ್ ಹ್ಯಾಂಡಲ್, 20 ಅಡಿ ಸುತ್ತಳತೆಯ ಕಬ್ಬಿಣದ ಪೈಪ್, 360 ಕೋನದಲ್ಲಿ ತಿರುಗುವ ನಾಲ್ಕು ಗಾಲಿ, ಹೊಂದಾಣಿಕೆಯ ಸ್ಪ್ರಿಂಗ್, ಕಬ್ಬಿಣದ ರಾಡ್ ಹಾಗೂ ನಟ್, ಬೋಲ್ಟ್ಗಳನ್ನು ಬಳಸಿ ‘ಹಾಟ್ ವೆಸಲ್ ಕ್ಯಾರಿಯರ್ ಕಿಟ್’ ತಯಾರಿಸಿದ್ದಾಳೆ. ವಿದ್ಯುತ್ ಅಥವಾ ಇಂಧನಗಳ ಅಗತ್ಯವಿಲ್ಲದೆ ಅದನ್ನು ಎಲ್ಲರೂ ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ನಾಲ್ಕು ಜನರು ಮಾಡಬಹುದಾದ ಕೆಲಸವನ್ನು ಒಬ್ಬರೇ ಮಾಡಬಹುದಾಗಿದೆ.

ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಈ ಮಾದರಿ ಜಪಾನಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದೆ.

ಶಾಲೆಗಳಲ್ಲಿ ಬಿಸಿಯೂಟ ಸಾಗಿಸುವವರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಮಾದರಿ ತಯಾರಿಸಿದ್ದು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ಮೂಡಿಸಿದೆ
ರಕ್ಷಿತಾ ಚುರ್ಚಿಹಾಳ ವಿದ್ಯಾರ್ಥಿನಿ

ರಕ್ಷತಾಳ ಸಾಧನೆ ಶ್ಲಾಘನೀಯ ರಕ್ಷತಾ ‘ಇನ್ಸ್ಫೈರ್ ಅವಾರ್ಡ್ ಸ್ಪರ್ಧೆ’ಗೆ ತಯಾರಿಸಿದ್ದ ಮಾದರಿಯು ತಾಲ್ಲೂಕು ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜೂನ್ 21ರವರೆಗೆ ಜಪಾನಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅದು ಪ್ರದರ್ಶನಗೊಳ್ಳಲಿದೆ. ವಸ್ತು ಪ್ರದರ್ಶನದಲ್ಲಿ ರಾಜ್ಯದಿಂದ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ರಕ್ಷತಾ ಒಬ್ಬಳಾಗಿದ್ದಾಳೆ. ಜೂನ್ 14ರಂದು ರಾಜ್ಯ ತಂಡದೊಂದಿಗೆ ಅಕ್ಷತಾ ಜಪಾನಿಗೆ ತೆರಳಿದ್ದಾಳೆ. ಕುಗ್ರಾಮದಿಂದ ಜಪಾನ್ ದೇಶದವರೆಗೆ ಸಾಗಿದ ರಕ್ಷತಾಳ ಈ ಸಾಧನೆಯು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ ಎಂದು ಶಿಕ್ಷಕರು ಹಾಗೂ ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.