ಶುಕ್ರವಾರ, ಜೂನ್ 25, 2021
30 °C

ಗದಗ: ‘ಹೆಂಗಸರನ್ನು ಚುಡಾಯಿಸುತ್ತಾರೆ ಆರೋಪ ಸತ್ಯಕ್ಕೆ ದೂರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ‘ಸಂತ್ರಸ್ತರ ನೆರವಿಗೆ ಸದಾ ಮುಂದೆ ಇರುವ ನಮ್ಮ ಗ್ರಾಮಸ್ಥರ ಮೇಲೆ ಲಕಮಾಪುರ ಯುವಕರು ಹೆಂಗಸರನ್ನು ಚುಡಾಯಿಸುತ್ತಾರೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ’ ಎಂದು ಬೆಳ್ಳೇರಿ ಗ್ರಾಮದ ಬಿಜೆಪಿ ಯುವ ಮುಖಂಡ ಬಾಬು ಹಿರೇಹೊಳಿ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಬೆಳ್ಳೇರಿಯಲ್ಲಿ ಲಕಮಾಪುರ ಹಾಗೂ ಬೆಳ್ಳೇರಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳ್ಳೇರಿ ಗ್ರಾಮಸ್ಥರು ಲಕಮಾಪುರ ಗ್ರಾಮದ ಎಲ್ಲರಿಗೂ ನಿರಂತರ ಸಹಾಯ, ಸಹಕಾರ ನೀಡುತ್ತಿದ್ದೇವೆ. ಈ ಆರೋಪ ನಿರಾಧಾರವಾದುದು. ಲಕಮಾಪುರ ಯುವಕರು ಸುಮ್ಮನೇ ಹೇಳಿಕೆ ನೀಡುವುದು ಸಲ್ಲ. ಲಕಮಾಪುರ ಜನತೆಗೆ ಇಲ್ಲಿಯ ಕಾಳಜಿ ಕೇಂದ್ರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗೆ ಸಹಕಾರ ನೀಡಿದ್ದೇವೆ, ಮುಂದೆಯೂ ನೀಡಲಾಗುವುದು’ ಎಂದರು.

ಇದನ್ನೂ ಓದಿ: ​ಗದಗ | ‘ಚುಡಾಯಿಸ್ತಾರ‍್ರೀ, ನಾವು ಅಲ್ಲಿಗೆ ಹೋಗಂಗಿಲ್ಲ’

ಲಕಮಾಪುರದ ವೆಂಕನಗೌಡ ನಡಮನಿ ಮಾತನಾಡಿ, ‘ಬೆಳ್ಳೇರಿ ಮತ್ತು ಲಕಮಾಪುರ ಗ್ರಾಮಸ್ಥರು ಹಿಂದಿನಿಂದಲೂ ಸೌಹಾರ್ದದಿಂದ ಇದ್ದೇವೆ. ನಮ್ಮ ಊರಿನ ಯುವಕರು ಈ ರೀತಿ ಹೇಳಿಕೆ ನೀಡಬಾರದಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ.  ಮುಂದೆಯೂ ಪರಸ್ಪರ ಬಾಂಧವ್ಯದಿಂದ ಇರುತ್ತೇವೆ’ ಎಂದರು.

ಸಭೆಯಲ್ಲಿ ಎರಡೂ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.

    ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು