ಗದಗ: ಜಿಲ್ಲೆಯ ಒಂದು ಬದಿ ಹರಿದಿರುವ ಮಲಪ್ರಭಾ,ಇನ್ನೊಂದು ಬದಿಯಿಂದ ಹರಿದಿರುವ ತುಂಗಭದ್ರಾ, ಜಿಲ್ಲೆಯ ನಡುವಿನಿಂದಲೇ ಹರಿದು ಹೋಗಿರುವ ಬೆಣ್ಣೆಹಳ್ಳ ಇವು ಮೂರರಲ್ಲೂ ನೀರಿನ ಒಳ ಹರಿವು ಹೆಚ್ಚಿದ್ದು, ನದಿದಂಡೆಯ 13 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ನರಗುಂದ ತಾಲ್ಲೂಕಿನ ಲಕುಮಾಪುರದಿಂದ ರೋಣ ತಾಲ್ಲೂಕಿನ ಕುರುವಿನಕೊಪ್ಪ ವ್ಯಾಪ್ತಿಯ ಗ್ರಾಮಗಳಿಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಮಲಪ್ರಭಾ ನದಿ ನೀರು ನುಗ್ಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತವು ಈಗಾಗಲೇ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಬುಧವಾರ 70 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಇದರಿಂದ ಮಲಪ್ರಭಾ ನದಿಪಾತ್ರದಲ್ಲಿ ಬರುವ ನರಗುಂದ ತಾಲ್ಲೂಕಿನ ಲಕಮಾಪುರ, ವಾಸನ, ಬೆಳ್ಳೇರಿ, ಬೂದಿಹಾಳ, ಕಪ್ಪಲಗಿ, ಕಲ್ಲಾಪುರ, ಶಿರೋಳ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಮಂಗಳವಾರ ರಾತ್ರಿಯೇ ಈ ಗ್ರಾಮಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಕೆಲವರು ಇನ್ನೂ ಗ್ರಾಮಗಳಲ್ಲೇ ಉಳಿದುಕೊಂಡಿದ್ದು, ಬುಧವಾರ ಸಂಜೆ ಅವರನ್ನು ಸ್ಥಳಾಂತರಿಸಲಾಯಿತು.

ರೋಣ ತಾಲ್ಲೂಕಿನ ಹೊಳೆಆಲೂರು, ಕುರುವಿನಕೊಪ್ಪ, ಹೊಳೆಹಡಗಲಿ, ಹೊಳೆಮಣ್ಣೂರು, ಗಾಡಗೋಳಿ, ಮೆಣಸಗಿ, ಬಿ.ಎಸ್ ಬೇಲೇರಿ, ಗುಳಗುಂದಿ, ಅಮರಗೋಳ ಗ್ರಾಮಗಳು ಮಲಪ್ರಭಾ ಪ್ರವಾಹ ಭೀತಿ ಎದುರಿಸುತ್ತಿದ್ದು, 2010ರಲ್ಲಿ ಇಲ್ಲಿ ಪ್ರವಾಹ ಉಂಟಾದಾಗ ಜಿಲ್ಲಾಡಳಿತವು ಇವರಿಗಾಗಿ 1 ಸಾವಿರಕ್ಕೂ ಹೆಚ್ಚು ಆಸರೆ ಮನೆಗಳನ್ನು ನಿರ್ಮಿಸಿತ್ತು. ಈ ಆಸರೆ ಮನೆಗಳಿಗೆ ಜನರು ಸ್ಥಳಾಂತರಗೊಂಡರು.

ಗಂಜಿ ಕೇಂದ್ರ ಆರಂಭ: ನರಗುಂದ ತಾಲ್ಲೂಕಿನಲ್ಲಿ 4 ಹಾಗೂ ರೋಣ ತಾಲ್ಲೂಕಿನಲ್ಲಿ 2 ಸೇರಿದಂತೆ ಒಟ್ಟು 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸದ್ಯ 2,857 ಕುಟುಂಬಗಳ 13, 398 ಜನರಿಗೆ ಆಶ್ರಯ ಒದಗಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.

ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳ: ಶಿಗ್ಗಾಂವಿ ತಾಲ್ಲೂಕಿನ ದುಂಡಸಿಯಿಂದ ಆರಂಭಗೊಂಡು, ನರಗುಂದ ತಾಲ್ಲೂಕಿನ ಕುರ್ಲಗೇರಿ, ಸುರಕೋಡ, ಯಾವಗಲ್, ಮೆಣಸಗಿ, ಹೊಳೆ ಆಲೂರು ಮಾರ್ಗವಾಗಿ ಹರಿದು ಹೋಗುವ ಬೆಣ್ಣೆಹಳ್ಳದಲ್ಲೂ ಸದ್ಯ ನೀರಿನ ಒಳಹರಿವು ಹೆಚ್ಚಿದೆ. ಈ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಿದರೆ ಇದರ ವ್ಯಾಪ್ತಿಗೆ ಬರುವ ಕುರ್ಲಗೇರಿ, ಸುರಕೋಡ, ಗಂಗಾಪುರ, ಖಾನಾಪುರ, ಯಾಸ ಹಡಗಲಿ, ಗ್ರಾಮಗಳಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.