ಗದಗ: ಜನತಾ ದರ್ಶನ ಕಾರ್ಯಕ್ರಮಕ್ಕೆ ಬರದೇ ಗೈರಾಗಿದ್ದ ಅಧಿಕಾರಿ ವಿರುದ್ಧ ಸಚಿವ ಎಚ್.ಕೆ.ಪಾಟೀಲ ಗರಂ ಆದ ಘಟನೆ ಬುಧವಾರ ನಡೆಯಿತು. ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

35ನೇ ವಾರ್ಡ್ನಲ್ಲಿ ಮೂಲಸೌಕರ್ಯ ಇಲ್ಲವೆಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಕುಡಿಯುವ ನೀರು ಸಿಗುತ್ತಿಲ್ಲ. ರಸ್ತೆಗಳು ಆಗಿಲ್ಲ. ನಗರೋತ್ಥಾನ ಯೋಜನೆ ಅಡಿ ಭೂಮಿಪೂಜೆಯಾಗಿ ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಏನು ಮಾಡುವುದು? ಎಂದು ನಾಗರಿಕರು ಪ್ರಶ್ನಿಸಿದರು.

ಭೂಮಿಪೂಜೆ ಆದ ಕಾಮಗಾರಿ ಇನ್ನೂ ಯಾಕೆ ಪ್ರಾರಂಭಿಸಿಲ್ಲ? ಎಂದು ಸಚಿವರು, ನಗರಸಭೆ ಪೌರಾಯುಕ್ತರನ್ನು ಪ್ರಶ್ನಿಸಿದರು. ಸಂಬಂಧಪಟ್ಟ ಎಂಜಿನಿಯರ್ ಕರೆಸುವಂತೆ ಸೂಚಿಸಿದರು. ಅವರು ಬಂದಿಲ್ಲ ಎಂದು ಪೌರಾಯುಕ್ತರು ಹೇಳಿದರು.

ಆಗ, ಸಚಿವರು ಅವ ಬರದಿದ್ದರೆ ಅವನ ಕೆಳಗಿನ ಅಧಿಕಾರಿ ಬಂದಿಲ್ಲವೇ? ಅವನನ್ನು ಕರೆಸು? ಎಂದು ಗರಂ ಆದರು. ಆನಂದ್ ಬದಿ ಇದ್ದಾರೆ ಎಂದು ಹೇಳಿದರು.

ಆಗ ಸಚಿವ ಎಚ್.ಕೆ.ಪಾಟೀಲರು, ‘ಆನಂದ್ ಬದಿ, ಎಲ್ಲಾರಾ ಇದಿಯೇನೋ?, ಬದಿ ಮತ್ತು ಶೇರ್ಖಾನ್ ಎಲ್ಲಿದ್ದೀರಾ?

ಆಗ ಶೇರ್ ಖಾನ್ ಬಂದರು. ಮತ್ತೇ ಸಚಿವರು, ಬದಿ ಎಲ್ಲಿದ್ದಾನೆ? ಆಗಲೇ ಮಧ್ಯಾಹ್ನ ಆಯ್ತಾ, ದಣಿದುಕೊಂಡು ಹೋದನೇನು? ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನು ಉದ್ದೇಶಿಸಿ, ಏನು ಸಾಹೇಬ್ರೇ ಇದು? ದಿಸ್ ಇಸ್ ಯುವರ್ ಪೀಪಲ್? ಹಿಂಗಾದ್ರೆ ಹೇಗೆ? ಎಲ್ಲಿದ್ದಾನೆ ಅವ್ನು? ಅಂತ ಗರಂ ಆದರು.

ಅವನನ್ನು ಸಂಜೆಯೊಳಗೆ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.