ಗದಗ: ‘ಲಕ್ಕುಂಡಿಯಲ್ಲಿ ನಿಧಿ ರೂಪದಲ್ಲಿ ಸಿಕ್ಕ ಚಿನ್ನಾಭರಣವನ್ನು ಪುರತಾತತ್ವ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಪರಿಶೀಲಿಸಿದ್ದು, ಇವು ವಿಜಯನಗರ ಸಾಮ್ರಾಜ್ಯ ಕಾಲಘಟ್ಟದ್ದು ಇರಬಹುದೆಂದು ಅಂದಾಜಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದ್ದಾರೆ.

‘ಭಾರತೀಯ ಪುರಾತತ್ವ ಇಲಾಖೆಯ ಉಪ ಅಧೀಕ್ಷಕ ಹಾಗೂ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಮತ್ತು ಅವರ ತಂಡ ಆಭರಣಗಳ ಫೋಟೊಗ್ರಫಿ ಮತ್ತು ವಿಡಿಯೊಗ್ರಫಿ ಮಾಡಿದೆ. ಅವುಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ, ಮೂರು ದಿನಗಳಲ್ಲಿ ವಿವರವಾದ ವರದಿ ನೀಡುವರು’ ಎಂದು ಅವರು ತಿಳಿಸಿದರು.

‘ಅಧಿಕಾರಿಗಳು ವರದಿ ಕೊಟ್ಟ ಬಳಿಕವಷ್ಟೇ ಅದು ನಿಧಿ ಅಥವಾ ಅಲ್ಲವೇ ಎಂಬುದು ಗೊತ್ತಾಗಲಿದೆ. ಒಂದು ವೇಳೆ ಈ ಚಿನ್ನಾಭರಣ ತಮ್ಮ ವಂಶಸ್ಥರದ್ದು ಎಂದು ದಾಖಲೆಗಳನ್ನು ತಂದುಕೊಟ್ಟು ಸಾಬೀತು ಪಡಿಸಿದರೆ, ಆವಾಗ ಅದರ ದಿಕ್ಕು ಬದಲಾಗಲಿದೆ. ಆಗ ಸರ್ಕಾರದ ತೀರ್ಮಾನ ಬೇರೆ ಇರುತ್ತದೆ’ ಎಂದು ಹೇಳಿದರು.

‘ಆಭರಣಗಳ ಮೇಲೆ ಮಣ್ಣು ಮೆತ್ತಿಕೊಂಡಿದ್ದರಿಂದ ತೂಕದಲ್ಲಿ ವ್ಯತ್ಯಾಸ ಆಗಿದೆ. ಮಂಗಳವಾರ ರಾತ್ರಿ ತೂಕ ಮಾಡಿದಾಗ ಆಭರಣಗಳು 462 ಗ್ರಾಂ ತೂಗಿದೆ. ಆಭರಣಗಳನ್ನು ಪೂರ್ಣ ಸ್ವಚ್ಛಗೊಳಿಸಿದರೆ, ಅದರ ನಿಖರ ತೂಕ ಗೊತ್ತಾಗಲಿದೆ’ ಎಂದು ಹೇಳಿದರು.