ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ಯೋಜನೆ: ಸ್ಫೂರ್ತಿ ತುಂಬಿದ ವೃದ್ಧ ದಂಪತಿ

Last Updated 8 ಏಪ್ರಿಲ್ 2021, 13:16 IST
ಅಕ್ಷರ ಗಾತ್ರ

ನರೇಗಲ್ (ಗದಗ):‌ ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವೃದ್ಧ ದಂಪತಿ ಯುವಜನರೇ ನಾಚುವಂತೆ ಬದು ನಿರ್ಮಾಣ ಕಾಮಗಾರಿಯಲ್ಲಿ ದುಡಿದು ಎಲ್ಲರಿಗೆ ಸ್ಫೂರ್ತಿಯಾಗಿದ್ದಾರೆ.

ಅಬ್ಬಿಗೇರಿ ಗ್ರಾಮದ 69ರ ಕಂಠಯ್ಯ ಮಠಪತಿ ಹಾಗೂ 65ರ ಪಾರವ್ವ ಕಂಠಯ್ಯ ಮಠಪತಿ ಹೊಲವೊಂದರಲ್ಲಿ ನಡೆದಿರುವ ‘ದುಡಿಯೋಣ ಬಾ’ ಕಾಮಗಾರಿಯಲ್ಲಿ ದುಡಿಯುತ್ತಿರುವುದನ್ನು ನೋಡಿದ ಯುವಜನರೂ ಕೆಲಸಕ್ಕೆ ಹಾಜರಾಗಿದ್ದಾರೆ.

‘ಬೆವರು ಸುರಿಸಿ ದುಡಿದರೆ ಭೂಮಿ ತಾಯಿ ನಮ್ಮನ್ನು ಚೆನ್ನಾಗಿ ಇಟ್ಟಿರುತ್ತಾಳೆ. ದುಡಿಮೆ ತಕ್ಕಂತೆ ಊಟ ಹೋಗುತ್ತದೆ, ಯಾವುದೇ ರೋಗಗಳು ಬರುವುದಿಲ್ಲ’ ಎಂದು ಮಠಪತಿ ದಂಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಯಸ್ಸಿನಲ್ಲಿ ಹಿರಿಯರಾದರೂ ಕೆಲಸದಲ್ಲಿ ಯುವಕರಂತೆ ದುಡಿಯುತ್ತಿರುವ ದಂಪತಿ ನಮ್ಮೂರಿನ ಜನರಿಗೆ ಮಾದರಿಯಾಗಿದ್ದಾರೆ. ಸದ್ಯ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಕಾರ್ಮಿಕರೂ ಕೆಲಸಕ್ಕೆ ಬರುತ್ತಿದ್ದಾರೆ. ಅದರಲ್ಲಿ ನೂರಕ್ಕೂ ಹೆಚ್ಚು ಜನ ಹಿರಿಯ ನಾಗರಿಕರು ಇದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT