ಗದಗ: ಪಂಡಿತ್ ಪಂಚಾಕ್ಷರ ಗವಾಯಿ ಹಾಗೂ ಪಂಡಿತ್ ಪುಟ್ಟರಾಜ ಕವಿ ಗವಾಯಿ ಅವರ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವಕ್ಕೆ ಇಲ್ಲಿನ ವೀರೇಶ್ವರ ಪುಣ್ಯಾಶ್ರಮ ಸಜ್ಜಾಗಿದೆ. ಜೂನ್ 12ರಿಂದ 16ರವರೆಗೆ ರಾಜ್ಯ ಹಾಗೂ ಹೊರರಾಜ್ಯಗಳ ಸಂಗೀತ ಕಲಾವಿದರಿಂದ ಗಾನ ಸುಧೆ ಹರಿಯಲಿದೆ.

ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿತವರಷ್ಟೇ ಅಲ್ಲದೇ; ಪುಣ್ಯಾಶ್ರಮದ ಬಗ್ಗೆ ಅಭಿಮಾನವುಳ್ಳ ಹೊರಗಿನ ಸಂಗೀತ ಕಲಾವಿದರು ಸಂಗೀತ ಸೇವೆ ಪ್ರಸ್ತುತಪಡಿಸುವರು. ಕೀರ್ತನಕಾರರು, ಸಂಗೀತಗಾರರು, ವಾದ್ಯ ಕಲಾವಿದರು ಸೇರಿ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು. ಅವರಿಗಾಗಿ ಹೋಟೆಲ್ಗಳಲ್ಲಿ ಅಲ್ಲದೇ ಇತರೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ.

‘ಪಂಚಾಕ್ಷರ ಗವಾಯಿ ಅವರು ಸಂಗೀತ ಪ್ರಪಂಚದ ಮೂಲ ಬೇರು. ಅವರಿಂದಲೇ ಇಡೀ ದೇಶದಲ್ಲಿ ಸಂಗೀತ ಪ್ರಸಾರವಾಗಿದೆ ಎಂಬ ಅಭಿಮಾನವುಳ್ಳ ಮಹಾರಾಷ್ಟ್ರ, ಮಧ್ಯಪ್ರದೇಶ, ಭೋಪಾಲ್ ಸೇರಿ ವಿವಿಧೆಡೆಯಿಂದ ಅನೇಕ ಸಂಗೀತಗಾರರು ಜಾತ್ರೆಯಲ್ಲಿ ಉಚಿತ ಸಂಗೀತ ಸೇವೆ ನೀಡುವರು. ವೀರೇಶ್ವರ ಪುಣ್ಯಾಶ್ರಮದಿಂದ ಇವರಿಗೆ ಊಟೋಪಚಾರ, ವಸತಿ ವ್ಯವಸ್ಥೆ, ಶಾಲು– ಮಾಲೆ ಬಿಟ್ಟರೆ ಬೇರೇನೂ ಸಿಗುವುದಿಲ್ಲ’ ಎಂದು ವೀರೇಶ್ವರ ಪುಣ್ಯಾಶ್ರಮದ ಎಂ. ಕಲ್ಲಿನಾಥ ಶಾಸ್ತ್ರಿ ಅಡ್ನೂರ ತಿಳಿಸಿದರು.

‘ಹೊರಗಿನ ಸಂಗೀತ ಕಲಾವಿದರಿಗೆ ವೀರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವದಲ್ಲಿ ಸೇವೆ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸುವ ಹುರುಪು ಬರುತ್ತದೆ ಎಂಬ ಭಾವವಿದೆ. ಆ ಆಶಯದಿಂದ ಪ್ರತಿ ವರ್ಷ ಮುಂಬೈ, ಮೀರಜ್, ಸೊಲ್ಹಾಪುರ, ಕೊಲ್ಹಾಪುರ, ಮಧ್ಯಪ್ರದೇಶ, ಭೋಪಾಲ್, ಚೆನ್ನೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ನೂರಾರು ಮಂದಿ ಕಲಾವಿದರು ಬಂದು ಸಂಗೀತ ಸೇವೆ ನೀಡುತ್ತಾರೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ತಿಳಿಸಿದರು.

ಭೋಪಾಲ್ನ ಶ್ರದ್ಧಾ ಜೈನ್ ಸಾಂಗ್ಲಿಯ ಕೃಷ್ಣಾ ಮುಖೇಡರಕರ್ ಕೊಲ್ಹಾಪುರದ ಸುಧೀರ ಪೋಟೆ ಗೋವಾದ ಸುಭಾಸ ಪವಾರ ಸೇರಿ ರಾಜ್ಯದ ಸಂಗೀತ ಕಲಾವಿದರು ಸ್ವರ ಶ್ರದ್ಧಾಂಜಲಿ ಸಲ್ಲಿಸುವರು.
ಕಲ್ಲಯ್ಯಜ್ಜ ಪೀಠಾಧಿಪತಿ ವೀರೇಶ್ವರ ಪುಣ್ಯಾಶ್ರಮ

ಕೀರ್ತನ ಸಮ್ಮೇಳನ, ಅಹೋರಾತ್ರಿ ಸಂಗೀತೋತ್ಸವ

ಜೂನ್ 12 ಮತ್ತು 13ರಂದು ಕೀರ್ತನ ಸಮ್ಮೇಳನ ಅಂಧರಗೋಷ್ಠಿ ನಡೆಯಲಿದೆ. ವಿರುಪಾಕ್ಷಯ್ಯಶಾಸ್ತ್ರಿ ಕಳಲಕೊಂಡ ಮಲ್ಲಿಕಾರ್ಜುನ ಶಾಸ್ತ್ರಿ ಸೇರಿ ನಾಡಿನ ವಿವಿಧೆಡೆಯಿಂದ 100ಕ್ಕೂ ಹೆಚ್ಚು ಮಂದಿ ಕೀರ್ತನಕಾರರು ಭಾಗವಹಿಸಿ ಕಾರ್ಯಕ್ರಮ ನೀಡುವರು. ಅಂಧ ಕಲಾವಿದರು ತಮ್ಮ ಬದುಕಿನ ಏರಿಳಿತದ ಬಗ್ಗೆ ಮಾತನಾಡುವರು. ಜೂನ್ 14 15 ಮತ್ತು 16ರಂದು 10ಕ್ಕೆ ಸ್ವರ ಶ್ರದ್ಧಾಂಜಲಿ ಸಂಗೀತ ಸಮಾರಾಧನೆ ಕಾರ್ಯಕ್ರಮ ನಡೆಯಲಿದೆ. ಅಹೋರಾತ್ರಿ ಸಂಗೀತ ಸೇವೆ ಇರಲಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಸಂಗೀತ ಕಲಾವಿದರು ಭಾಗವಹಿಸುವರು. 50ಕ್ಕೂ ಹೆಚ್ಚು ಮಂದಿ ವಾದ್ಯ ಕಲಾವಿದರು ಸಾಥ್ ನೀಡುವರು. ಹೆಸರಾಂತ ಕಲಾವಿದರಿಗೆ 1 ಗಂಟೆ ಉಳಿದವರಿಗೆ ಅರ್ಧ ಗಂಟೆ ಸಮಯ ನೀಡಲಾಗುವುದು. ಜೂನ್ 16ರಂದು ರಾತ್ರಿ 10ಕ್ಕೆ ಶುರುವಾಗುವ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜೂನ್ 17ರ ಮಧ್ಯಾಹ್ನ 3ರವರೆಗೆ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.