ಮುಳಗುಂದ: ಜೂ.3ರಿಂದ ಆರಂಭವಾಗಿದ್ದ ಇಲ್ಲಿನ ಗ್ರಾಮದೇವತೆಯ ಟೋಪ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು. ಜಾತ್ರೆ ಅಂಗವಾಗಿ ದ್ಯಾಮವ್ವ, ದುರ್ಗಾ ದೇವತೆಯರಿಗೆ ಮುಸ್ಲಿಮರೂ ಉಡಿ ತುಂಬಿ ಸೌಹಾರ್ದತೆಗೆ ಸಾಕ್ಷಿಯಾದರು.

ಗ್ರಾಮದೇವತೆ ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿ ಸಿದ್ದೇಶ್ವರ ದೇವಸ್ಥಾನದಿಂದ ಗ್ರಾಮದೇವತೆಯ ಭವ್ಯ ಮೆರವಣಿಗೆ ಹೊರಟು, ಅಹೋರಾತ್ರಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿತು.

ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ಗೊಂಬೆ ಕುಣಿತ ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯು ಶುಕ್ರವಾರ ಪ್ರಾತಃಕಾಲ ದೇವಸ್ಥಾನ ತಲುಪಿತು. ನಂತರ ಗ್ರಾಮದೇವತೆಗೆ ಹೋಮ ಹವನ, ಊರಿನ ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಅಂಜುಮನ್ ಕಮಿಟಿ ವತಿಯಿಂದ ಮುಸ್ಲಿಂ ಮಹಿಳೆಯರು ಚೌತ ಕಟ್ಟಿಯಿಂದ ಗ್ರಾಮದೇವತೆಯ ದೇವಸ್ಥಾನದವರೆಗೆ ಶುಕ್ರವಾರ ವಾದ್ಯಮೇಳ, ಪಾದಯಾತ್ರೆ ಮೂಲಕ ತೆರಳಿ ದೇವಿಗೆ ಉಡಿತುಂಬಿ ನಮಿಸಿದರು.

ಸ್ಥಳೀಯ ಅಂಜುಮನ್ ಕಮಿಟಿ ಅಧ್ಯಕ್ಷ ತಾಜ್ಜುದ್ದಿನ ಕಿಂಡ್ರಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಮುಖಂಡರಾದ ಎ.ಡಿ. ಮುಜಾವರ, ದಾವೂದ್ ಜಮಾಲಸಾಬನವರ, ಬಸವರಾಜ ಕುತ್ನಿ, ಮುನ್ನಾ ಡಾಲಾಯತ್, ಹೈದರಾಲಿ ಖವಾಸ, ದಾವಲಸಾಬ ಲಕ್ಷ್ಮೇಶ್ವರ, ಹಿರಿಯರಾದ ಹಸನಸಾಬ ಹುಬ್ಬಳ್ಳಿ, ಎಂ.ಎಂ. ನದ್ದೀಮುಲ್ಲಾ, ಎಂ.ಎ. ಖಾಜಿ, ಲಾಲಶಾಪೀರ ಮಕಾನದಾರ, ರಾಜೇಸಾಬ ಸೈಯದಬಡೆ, ಮಾಬೂಲಿ ದುರ್ಗಿಗುಡಿ, ಜಾಫರ್ ಭದ್ರಾಪೂರ, ದಾವಲಸಾಬ ಕುರ್ತಕೋಟಿ, ಇಬ್ರಾಹಿಂ ಹಣಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.