ನರಗುಂದ: ‘ನಂಜುಡಪ್ಪ ವರದಿ ಕೇವಲ ದಾಖಲೆಗೆ ಸೀಮಿತವಾಗದೇ ಯಥಾವತ್ತಾಗಿ ಜಾರಿಯಾಬೇಕು’ ಎಂದು ತಾಲ್ಲೂಕಿನ ಭೈರನಹಟ್ಟಿ-ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಂಜುಡಪ್ಪ ವರದಿ ರಚನೆಯಾಗಿ 23 ವರ್ಷ ಗತಿಸಿದರೂ ಉತ್ತರ ಕರ್ನಾಟಕ ಅಭಿವೃದ್ಧಿ ವಂಚಿತವಾಗಿದೆ. ಈ ವರದಿಯಡಿ ಸಾಕಷ್ಟು ಹಣವನ್ನು ಹಂಚಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ಇಪ್ಪತ್ತು ವರ್ಷಗಳಲ್ಲಿ ಶೇ65 ರಿಂದ 72.8 ಕ್ಕೆ ಏರಿಕೆಯಾಗಿದ್ದು, ಪ್ರಾದೇಶಿಕ ಅಸಮತೋಲನ ಹೆಚ್ಚಾಗಿದೆ. ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.

ನಂಜುಂಡಪ್ಪ ವರದಿಯನ್ನು ಡಾ.ಎಂ ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಪರಿಷ್ಕರಣೆ ಮಾಡಿ ಮರುವರದಿ ಸಿದ್ದಪಡಿಸಲಾಗಿದೆ. ಈ ಸಮಿತಿಯ ಪ್ರಕಾರ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ₹43,914 ಕೋಟಿ ಉಪಯೋಗಿಸುವುದು ಹಾಗೂ 1,484 ಸಾರ್ವಜನಿಕ ಶಾಲೆಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದು ಸಂತಸದ ಸಂಗತಿ. ಮುಖ್ಯಮಂತ್ರಿಗಳು ಡಾ. ಎಂ ಗೋವಿಂದರಾವ್ ಅವರ ಪರಿಷ್ಕೃತ ವರದಿಯನ್ನು ಪರಿಶೀಲಿಸಿ ಬಹುಬೇಗನೆ ನಂಜುಂಡಪ್ಪ ವರದಿಯನ್ನು ಜಾರಿ ಮಾಡಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶಾಂತಲಿಂಗ ಶ್ರೀ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.