ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇತನ ಪರಿಷ್ಕರಣೆಗೆ ಆಗ್ರಹ

Published : 29 ಆಗಸ್ಟ್ 2024, 14:26 IST
Last Updated : 29 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ನರಗುಂದ: ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರಿಗೆ 2020ರ ಜ.1 ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಅದನ್ನು 2023ರ ಮಾರ್ಚ 1ಕ್ಕೆ ಜಾರಿ ಮಾಡಲಾಗಿದೆ. 38 ತಿಂಗಳು ತಡವಾಗಿ ಜಾರಿ ಮಾಡಿದ್ದರಿಂದ 38 ತಿಂಗಳುಗಳ ವೇತನ ಹಿಂಬಾಕಿಯನ್ನು ನೀಡಬೇಕು. 2024ರ ಜ.1ರಿಂದ ವೇತನ ಪರಿಷ್ಕರಣೆ ಆಗಬೇಕು’ ಎಂದು ಸಾರಿಗೆ ನೌಕರರ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ ಗಾಣಿಗೇರ ಸರಕಾರಕ್ಕೆ ಆಗ್ರಹಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಜ್ದೂರ ಸಂಘ ಒಕ್ಕೂಟದ ವತಿಯಿಂದ ನಮ್ಮ ದುಡಿಮೆ ನಮ್ಮ ಹಕ್ಕಿಗಾಗಿ ಸರ್ಕಾರ ಮತ್ತು ಸಂಸ್ಥೆಯ ಗಮನ ಸೆಳೆಯಲು ನಡೆಸುತ್ತಿರುವ ಜಾಗೃತಿ ಜಾಥಾ ಗುರುವಾರ ನರಗುಂದಕ್ಕೆ ಆಗಮಿಸಿದ ಸಂದರ್ಭದಲ್ಲಿ ತಹಶೀಲ್ದಾರ್‌ ಹಾಗೂ ಬಸ್ ಡಿಪೊ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘8 ತಿಂಗಳಾದರೂ ವೇತನ ಹೆಚ್ಚಳ ಮಾಡಿಲ್ಲ. ಅಧಿಕಾರಿಗಳು ಕಿರುಕುಳ ಮತ್ತು ಭ್ರಷ್ಟಾಚಾರ ಇವೆಲ್ಲದರ ಬಗ್ಗೆ ಸಂಸ್ಥೆ ಮತ್ತು ಸರ್ಕಾರವನ್ನು ಗಮನ ಸೆಳೆಯಲು ಈ ಜಾಥಾ ನಡೆಸಲಾಗುತ್ತಿದೆ’ ಎಂದರು.

ಒಕ್ಕೂಟದ ಉಪಾಧ್ಯಕ್ಷ ಬಬಲೇಶ್ವರ ಮಾತನಾಡಿ, ‘ಶಕ್ತಿ ಯೋಜನೆ ಜಾರಿಗೆ ಆದಾಗಿನಿಂದ ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಸ್ವತಃ ಸಾರಿಗೆ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹೇಳುತ್ತಿದ್ದಾರೆ. ಹಾಗಾದರೆ ವೇತನ ನೀಡಲು ಹಿಂದೇಟು ಏಕೆ?. ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತೆ ಸರಿಸಮಾನ ವೇತನವನ್ನು ಸಾರಿಗೆ ನೌಕರರಿಗೂ ನೀಡಬೇಕು’ ಎಂದು  ಒತ್ತಾಯಿಸಿದರು.

ವಿಠ್ಠಲ ಕಾಪ್ಸೆ, ಅಕ್ಕಮ್ಮ ಮಳಲಿ, ಹೇಮಾ ಹಂಚಿನಾಳ, ವೀಣಾ ಕೋರಿ, ಜಗದೀಶ ಹಾಗೂ ಭಾರತೀಯ ಮಜ್ದೂರ ಸಂಘದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT