ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಂದನೆ, ಧರ್ಮಾಸ್ಪತ್ರೆಗೆ ಭೂಮಿಪೂಜೆ ಏ.8ರಂದು

Last Updated 6 ಏಪ್ರಿಲ್ 2022, 4:12 IST
ಅಕ್ಷರ ಗಾತ್ರ

ಗದಗ: ಶ್ರೀಶೈಲ ದೊಂಬರಕೊಪ್ಪದ ಶಿವಲಿಂಗೇಶ್ವರ ಸ್ವಾಮೀಜಿ (ಅಪ್ಪಾಜಿ) ಅವರ ಪ್ರಥಮ ಗುರುವಂದನೆ ಹಾಗೂ ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಸೇವೆ ಒದಗಿಸಲು ‘ಚೈತನ್ಯ’ ಧರ್ಮಾಸ್ಪತ್ರೆಯ ಭೂಮಿಪೂಜಾ ಸಮಾರಂಭ ಏ.8ಕ್ಕೆ ರೋಣ ತಾಲ್ಲೂಕಿನ ಭೋಪಳಾಪೂರ ಗ್ರಾಮದಲ್ಲಿ ನಡೆಯಲಿದೆ ಎಂದು ವರ್ತಕ ಶಿವಾನಂದ ನಿ. ಸಣ್ಣಕ್ಕಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏ.8ರಂದು ಬೆಳಿಗ್ಗೆ 8ಕ್ಕೆ ಭೋಪಳಾಪೂರ ಗ್ರಾಮದಲ್ಲಿ ಶ್ರೀಗಳಿಗೆ ಗುರುವಂದನೆ ನಡೆಯಲಿದೆ. ಗ್ರಾಮದ ಹಳೆಯ ಬೀರದೇವರ ದೇವಸ್ಥಾನದಿಂದ ಎರಡು ಆನೆ, ಎರಡು ಒಂಟೆ, ನಾಲ್ಕು ಕುದುರೆ, ಮುತ್ತೈದೆಯರಿಂದ 108 ಕುಂಭಮೇಳ, 108 ಆರತಿ, ಡೊಳ್ಳು ಸೇರಿ ಇತರೆ ವಾದ್ಯ ವೈಭವಗಳೊಂದಿಗೆ ಅವರನ್ನು ಸ್ವಾಗತಿಸಲಾಗುವುದು. ಬೆಳಿಗ್ಗೆ 10ಕ್ಕೆ ಸಣ್ಣಕ್ಕಿ ಅವರ ಜಮೀನಿನಲ್ಲಿ ‘ಚೈತನ್ಯ’ ಆಸ್ಪತ್ರೆಯ ಭೂಮಿಪೂಜೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ 14 ದೇವಸ್ಥಾನಗಳಲ್ಲಿ ಅಭಿಷೇಕ, ಪೂಜೆ ನಡೆಯಲಿದೆ ಎಂದು ಹೇಳಿದರು.

ಸರ್ಕಾರದ ನೆರವು ಪಡೆಯದೇ ಸಣ್ಣಕ್ಕಿ ಕುಟುಂಬವೇ ‘ಚೈತನ್ಯ’ ಎಂಬ ಹೆಸರಿನ ಧರ್ಮಾಸ್ಪತ್ರೆ ನಿರ್ಮಿಸುತ್ತಿದ್ದು, ಇದಕ್ಕೆ ಬೇಕಾದ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಉಚಿತ ಔಷಧಿ ಎಲ್ಲವನ್ನೂ ಸಣ್ಣಕ್ಕಿ ಕುಟುಂಬವೇ ನಿರ್ವಹಿಸಲಿದೆ ಎಂದು ಹೇಳಿದರು.

ಭೋಪಳಾಪೂರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ಬೆಲ್ಲದಿಂದ ತುಲಾಭಾರ ನಡೆಯಲಿದೆ. ಶ್ರೀಶೈಲ ದೊಂಬರಕೊಪ್ಪದ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ಯಾವುದೇ ಮಠವಿಲ್ಲ. ಇವರು ಲೋಕಕಲ್ಯಾಣಾರ್ಥವಾಗಿ ಸಂಚರಿಸುತ್ತಾರೆ. ಹಾಗಾಗಿ, ಅಪರೂಪವಾಗಿರುವ ಇವರ ದರ್ಶನವನ್ನು ಗದಗ ಜಿಲ್ಲೆಯ ಜನರು ಪಡೆಯಬಹುದು ಎಂದು ಹೇಳಿದರು.

ಪುನೀತಪ್ಪ ಸಾಂಬ್ರಾಣಿ, ಅಣ್ಣಪ್ಪಗೌಡ ಪಾಟೀಲ, ಶರಣಪ್ಪ ಜೋಗಿ, ಬಸಯ್ಯ ಸಾಲಿಮಠ, ಪ್ರಭುರಾಜ ಸಣ್ಣಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT