ಸೋಮವಾರ, ಅಕ್ಟೋಬರ್ 18, 2021
24 °C

ಫುಟ್‍ಪಾತ್‌ಗೆ ಕನ್ನಡ ಬಾವುಟದ ಬಣ್ಣ- ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಅವಳಿ ನಗರದ ಉದ್ಯಾನಗಳು ಹಾಗೂ ವಿವಿಧ ಕಡೆಗಳ ಫುಟ್‍ಪಾತ್ ಮೇಲೆ ಕನ್ನಡ ಧ್ವಜದ ಬಣ್ಣವನ್ನು ಬಳಸುವ ಮೂಲಕ ನಗರಸಭೆ ಅಧಿಕಾರಿಗಳು ಕನ್ನಡಕ್ಕೆ ಅಪಮಾನಿಸಿದ್ದಾರೆ ಎಂದು ಖಂಡಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಗದಗ ಜಿಲ್ಲೆ ಕನ್ನಡದ ಸರ್ವಾಂಗೀಣ ಏಳಿಗೆಗಾಗಿ ಶ್ರಮಿಸಿದ ನೆಲವಾಗಿದ್ದು, ಕನ್ನಡದ ಏಕೀಕರಣಕ್ಕೆ ಅಪಾರ ಕೊಡುಗೆ ನೀಡಿದೆ.  ಇಂತಹ ಪವಿತ್ರವಾದ ಜಾಗದಲ್ಲಿ ಗದಗ-ಬೆಟಗೇರಿ ನಗರಸಭೆಯವರು ಕಂಡಕಂಡಲ್ಲಿ ಕನ್ನಡ ಧ್ವಜದ ಬಣ್ಣವನ್ನು ಹಚ್ಚುವುದರ ಮೂಲಕ ಅವಮಾನಿಸಿದ್ದಾರೆ. ಕನ್ನಡ ನಾಡು, ನುಡಿಗೆ ಅವಮಾನಿಸಿದರೇ ಹೆತ್ತ ತಾಯಿಗೆ ಅವಮಾನಿಸಿದಂತೆ. ಕನ್ನಡಿಗರು ಸ್ವಾಭಿಮಾನಿಗಳು. ಆಕ್ರೋಶ ಭುಗಿಲೇಳುವ ಮುನ್ನ ತಪ್ಪು ಸರಿಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಎಚ್ಚರಿಸಿದರು.

ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿದ ಕನ್ನಡಪರ ಹೋರಾಟಗಾರರು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು ಎಂದು ಮಾನವ ಸರಪಳಿ ನಿರ್ಮಿಸಿ ಪಟ್ಟು ಹಿಡಿದರು.

ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಭಾಷಾಸಾಬ ಮಲ್ಲಸಮುದ್ರ, ನಾಗರಾಜ ಕ್ಷತ್ರಿಯ, ಅಲ್ತಾಫ್, ವಿಠ್ಠಲ ಬೆಂತೂರ ಹಾತಲಗೇರಿ, ನವೀನ ಬಂಡೂರಿ, ಗುರು ಸ್ವಾಮಿ ಹಿರೇಮಠ, ಮಂಜುಗೌಡ, ಮಾರುತಿ, ಅಬ್ಬು ರಾಟಿ, ದಾದು ಮುಂಡರಗಿ, ರಫೀಕ ಧಾರವಾಡ, ಚಿಮ್ಮಿ ನದಾಫ್‌ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.