ಬುಧವಾರ, ಮಾರ್ಚ್ 29, 2023
32 °C
ನಟ ಪುನೀತ್‌ ರಾಜ್‌ಕಮಾರ್‌ಗೆ ಶ್ರದ್ಧಾಂಜಲಿ

ಶಿರಹಟ್ಟಿ: ಚಿತ್ರರಂಗಕ್ಕೆ ಕೊಡುಗೆ ನೀಡಿದ ನಟ ಪುನೀತ್- ಸಿಪಿಐ ವಿಕಾಸ ಲಮಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಹಟ್ಟಿ: ಕನ್ನಡ ಚಿತ್ರರಂಗಕ್ಕೆ ಪುನೀತ್‌ ಕೊಡುಗೆ ಸದಾ ಸ್ಮರಣೀಯವಾಗಿದ್ದು, ಸಾಮಾಜಿಕ ಕಳಕಳಿ ಹಾಗೂ ಜೀವನ ಮೌಲ್ಯಗಳನ್ನು ಬಿಂಬಿಸುವ ಅವರ ಚಿತ್ರಗಳು ಕುಟುಂಬ ಸಮೇತ ನೋಡುವಂತಹವು ಎಂದು ಸಿಪಿಐ ವಿಕಾಸ ಲಮಾಣಿ ಹೇಳಿದರು.

ಪಟ್ಟಣದ ನೆಹರೂ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ನಡೆದ ಪುನೀತ್‌ ರಾಜ್‌ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಮೌಲ್ಯಗಳನ್ನು ಎತ್ತಿ ತೋರಿಸುವ ಅವರ ಚಲನಚಿತ್ರಗಳು ಮತ್ತು ಅವರ ಜೀವನ ಪ್ರತಿಯೊಬ್ಬರಿಗೂ ದಾರಿ ದೀಪ. ಸರಳ
ಸಜ್ಜನಿಕೆಯ ಮಾನವೀಯ ವ್ಯಕ್ತಿಯಾಗಿದ್ದ ಅವರು ಸದಾ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನೆನಸಿಕೊಂಡರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹುಮಾಯೂನ್‌ ಮಾಗಡಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ, ಎಚ್.ಎಂ. ದೇವಗಿರಿ ನಾಗರಾಜ ಲಕ್ಕುಂಡಿ, ಪ.ಪಂ ಸದಸ್ಯರಾದ ಮಂಜುನಾಥ್ ಘಂಟಿ, ಸಂದೀಪ ಕಪ್ಪತ್ತನವರ್, ಅಶರತಅಲಿ ಢಾಲಾಯತ, ಹೊನ್ನಪ್ಪ ಶಿರಹಟ್ಟಿ, ಮಾಬುಸಾಬ್ ಲಕ್ಷ್ಮೇಶ್ವರ, ಎಂ.ಕೆ. ಲಮಾಣಿ, ದೇವಪ್ಪ ಬಟ್ಟೂರ್, ಬಸವರಾಜ ತುಳಿ, ಕರಿಯಪ್ಪ ಕುಳಗೇರಿ, ಸಂಜು ಪೋತ್ರಜ್, ಇಂತಿಯಾಜ್ ಪಟ್ವೆಗರ್, ದೇವೇಂದ್ರ ಶಿಂಧೆ, ಕೃಷ್ಣ ಲೋಂಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು