ಲಕ್ಷ್ಮೇಶ್ವರ: ತಾಲ್ಲೂಕಿನ ಪುಟಗಾಂವ್ಬಡ್ನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2026-30ನೇ ಸಾಲಿನ ಆಡಳಿತ ಮಂಡಳಿಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಸತೀಶಗೌಡ ಪಾಟೀಲ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಮರಿಹೊಳಲಣ್ಣನವರ, ನಿರ್ದೇಶಕರಾಗಿ ದೇವಪ್ಪ ಕೊರಕನವರ, ಶಿವಮತ್ರಪ್ಪ ಚೋಟಗಲ್ಲ, ಶೇಕಪ್ಪ ಕರೆಣ್ಣವರ, ಹಸನಸಾಬ ಮೋದಿನಸಾಬ ಭಾವಿಕಟ್ಟಿ, ಲಲಿವ್ವ ಕರಬಸಪ್ಪ ಹರದಗಟ್ಟಿ, ದ್ರಾಕ್ಷಾಯಣವ್ವ ಭೀಮಣ್ಣ ಅತ್ತಿಗೇರಿ, ಹಾಲಪ್ಪ ಸೂರಣಗಿ, ಕುಮಾರಸ್ವಾಮಿ ಹಿರೇಮಠ, ಹನಮಂತಪ್ಪ ಮಾದರ, ನಾಗಪ್ಪ ಮಸೂತಿ ಆಯ್ಕೆಯಾದರು.

ನಂತರ ನಡೆದ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಹಿರಿಯ ಸಹಕಾರಿ ಧುರೀಣ ಗದಿಗೆಪ್ಪ ಯತ್ನಳ್ಳಿ, ‘ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಸದಸ್ಯರು ಸಕಾಲಕ್ಕೆ ಮರುಪಾವತಿಸಬೇಕು. ಈ ಮೂಲಕ ಸಂಘದ ಅಭಿವೃದ್ಧಿಗೆ ಮುಂದಾಗಬೇಕು. ಸ್ವಾರ್ಥರಹಿತ ಆಡಳಿತದಿಂದ ಮಾತ್ರ ಸಹಕಾರಿ ಕ್ಷೇತ್ರ ಪ್ರಗತಿ ಕಾಣಲು ಸಾಧ್ಯ’ ಎಂದು ತಿಳಿಸಿದರು.

ಕೆಸಿಸಿ ಬ್ಯಾಂಕಿನ ನಿರ್ದೇಶಕ ಜಿ.ವಿ. ಪಾಟೀಲ ಮಾತನಾಡಿ, ‘ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಬ್ಯಾಂಕಿನ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಯತ್ನ ಮಾಡುತ್ತೇನೆ. ಪರಸ್ಪರ ಸಹಕಾರ ಇದ್ದಾಗ ಮಾತ್ರ ಸಹಕಾರಿ ಕ್ಷೇತ್ರ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಸದಸ್ಯರು ತಮ್ಮ ಸಂಘದ ಪ್ರಗತಿ ಬಗ್ಗೆ ಸದಾ ಕಾಳಜಿ ಹೊಂದಿರಬೇಕು’ ಎಂದು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಂದ್ರಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.