ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಂಟದಾರ್ಯ ಶ್ರೀಗೆ ‘ಪ್ರಜಾವಾಣಿ’ ಜತೆಗೆ ಅವಿನಾಭಾವ ನಂಟು

Last Updated 20 ಅಕ್ಟೋಬರ್ 2018, 10:24 IST
ಅಕ್ಷರ ಗಾತ್ರ

ಗದಗ: ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ‘ಪ್ರಜಾವಾಣಿ’ಜತೆಗೆ ಅವಿನಾಭಾವ ನಂಟು ಹೊಂದಿದ್ದರು. ‘ಪ್ರಜಾವಾಣಿ’ಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಅವರು, ‘ಬಹುಭಾಷೆ, ಬಹುಜನ, ಬಹುಸಂಸ್ಕೃತಿಗಳ ಈ ದೇಶಕ್ಕೆ ಬಹುತ್ವ ಬೆಳೆಸುವಲ್ಲಿ ಪ್ರಜಾವಾಣಿ’ಮಹತ್ತರ ಕೊಡುಗೆ ನೀಡಿದೆ ಎಂದು ಸ್ಮರಿಸಿದ್ದರು.

ಆಧುನಿಕ ದಿನಮಾನದಲ್ಲಿ ಪತ್ರಿಕೋದ್ಯಮಕ್ಕೆ ಮಹತ್ವದ ಸ್ಥಾನವಿದೆ. ಇಂದಿನ ವಿದ್ಯುನ್ಮಾನ ಯುಗದಲ್ಲಿ ನಾವು ಚಂದ್ರಲೋಕ, ಮಂಗಳಲೋಕಗಳ ಸನಿಹದಲ್ಲಿ ಸಾಗುತ್ತಿರುವಾಗ ಈ ಜಗತ್ತು ಭೌಗೋಳಿಕವಾಗಿ ಬಹಳ ಸಣ್ಣದಾಗಿದೆ. ವಿಶಾಲವಾದ ಈ ಜಗತ್ತೇ ಒಂದು ಹಳ್ಳಿಯಂತಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ಪಾತ್ರ ಮುಖ್ಯವಾಗಿದೆ. ಈ ದಿಶೆಯಲ್ಲಿ ಕನ್ನಡ ಪತ್ರಿಕೊದ್ಯಮ ಕ್ಷೇತ್ರದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಇಂದು ಕನ್ನಡ ನಾಡಿನಲ್ಲಿ ಬೃಹತ್ತಾಗಿ, ಮಹತ್ತರವಾಗಿ ಬೆಳದಿದೆ. ಈ ಪತ್ರಿಕೆ ಪತ್ರಿಕಾ ರಂಗದಲ್ಲಿ ಬಹಳ ಒಳ್ಳೆಯ ಹೆಸರು ಮಾಡಿದೆ’ ಎಂದು ಅವರು ಹೇಳಿದ್ದರು.

‘ಪ್ರಜಾವಾಣಿ’ಕೇವಲ ಸುದ್ಧಿಗಳನ್ನು ಮಾತ್ರ ಬಿತ್ತರಿಸುವುದಿಲ್ಲ, ಅದರ ಜತೆಗೆ ಕರ್ನಾಟಕದ ನಾಡು, ನುಡಿ, ಆರ್ಥಿಕ ಅಭಿವೃದ್ಧಿ, ಸಂಸ್ಕೃತಿಗಳ ಪ್ರಸಾರ ಮಾಡುತ್ತಿದೆ. ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅಪಾರ ಕೊಡುಗೆ ನೀಡಿದೆ. ಬಹುಭಾಷೆ, ಬಹುಜನ, ಬಹುಸಂಸ್ಕೃತಿಗಳ ಈ ದೇಶಕ್ಕೆ ಬಹುತ್ವ ಬೆಳೆಸುವಲ್ಲಿ ಈ ಪತ್ರಿಕೆ ಸೇವೆ ಗಣನೀಯ. ಪಕ್ಷಾತೀತವಾಗಿ ಈ ಪತ್ರಿಕೆ ಸಾಗಿಬಂದಿದೆ. ಈಗ ಈ ಪತ್ರಿಕೆಗೆ 70 ವರ್ಷ ತುಂಬಿರುವುದು ಸಣ್ಣ ದಾರಿ ಏನಲ್ಲ. ಅದು ಸುದೀರ್ಘವಾದುದು. ಈ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ 70 ವರ್ಷ ಸಾರ್ಥಕವಾಗಿ ಕ್ರಮಿಸಿದೆ. ಭವಿಷ್ಯತ್ತಿನಲ್ಲಿ ಈ ಪತ್ರಿಕೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ’ ಎಂದು ಅವರು ಶುಭ ಹಾರೈಸಿದ್ದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT