ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ: ಜಾಗತಿಕ ಶಕ್ತಿ ಸ್ವಾತಂತ್ರ್ಯ ದಿನಾಚರಣೆ

Published 10 ಜುಲೈ 2024, 14:45 IST
Last Updated 10 ಜುಲೈ 2024, 14:45 IST
ಅಕ್ಷರ ಗಾತ್ರ

ಗದಗ: ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಾಗತಿಕ ಶಕ್ತಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರಸಿದ್ಧ ವಿಜ್ಞಾನಿ ನಿಕೋಲಾ ಟೆಸ್ಲಾ ಅವರ ಜನ್ಮದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಎಂ.ಎಂ.ಅವಟಿ, ‘ಶಕ್ತಿ ಸಂರಕ್ಷಣೆ ಪ್ರತಿಜ್ಞೆ’ ಬೋಧಿಸಿದರು. ಪುನರುತ್ಪಾದಕ ಶಕ್ತಿಯ ಬಳಕೆ ಮತ್ತು ಶಕ್ತಿ ಸಂರಕ್ಷಣೆ ನಮ್ಮ ಮುಂದಿನ ಪೀಳಿಗೆಗೆ ಅತಿ ಅಗತ್ಯ ಎಂದು ಹೇಳಿದರು.

ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ ಮಾತನಾಡಿ, ಟೆಸ್ಲಾ ಅವರ ಅವಿರತ ಶ್ರಮ ಮತ್ತು ನಾವೀನ್ಯತೆ ನಮ್ಮೆಲ್ಲರಿಗೂ ಪ್ರೇರಣೆ. ಟೆಸ್ಲಾ ಅವರ ವೈಜ್ಞಾನಿಕ ಕಾರ್ಯಗಳು ಮತ್ತು ಅವರ ಅವಿಸ್ಮರಣೀಯ ಆವಿಷ್ಕಾರಗಳು ಇಂದಿಗೂ ಪರಿಕಲ್ಪನೆಯಾದರೂ, ಅದರ ಪ್ರಭಾವವನ್ನು ನಾವು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಿಕೋಲಾ ಟೆಸ್ಲಾ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳು ಟೆಸ್ಲಾ ಅವರ ಸ್ಫೂರ್ತಿದಾಯಕ ಜೀವನ ಮತ್ತು ಅವರ ಆವಿಷ್ಕಾರಗಳ ಬಗ್ಗೆ ಪ್ರಬಂಧ ಮಂಡಿಸಿದರು. ಇದು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ಮತ್ತು ಆವಿಷ್ಕಾರಾತ್ಮಕ ಚಿಂತನೆಗಳನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಯಿತು.

ಜಗದೀಶ ಶಿವನಗುತ್ತಿ ಮತ್ತು ಪ್ರೊ. ಸಂತೋಷಕುಮಾರ್ ಜಿ.ಎಂ. ಅವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾಲೇಜು ಆವರಣದಲ್ಲಿ ಶಕ್ತಿ ಸ್ವಾತಂತ್ರ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಥಸಂಚಲನ ನಡೆಸಿದರು.

ಪಥಸಂಚಲನದ ನಂತರ, ವಿದ್ಯಾರ್ಥಿಗಳು ಶಕ್ತಿ ಉಳಿತಾಯ ಮತ್ತು ಪುನರುತ್ಪಾದಕ ಶಕ್ತಿಗಳ ಉಪಯೋಗದ ಬಗ್ಗೆ ಚಿತ್ರಗಳನ್ನು ಪ್ರದರ್ಶಿಸಿದರು.

ಪ್ರೊ. ಮಲ್ಲಿಕಾರ್ಜುನ ಜಿ.ಡಿ. ಮತ್ತು ಪ್ರೊ. ತೆಹಸಿನ್ ಶಿಗ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ.ಲೋಕೇಶ, ಪ್ರೊ.ರಮೇಶ ಬಡಿಗೇರ, ಪ್ರೊ. ಆರ್.ವಿ.ಕಡಿ, ಪ್ರೊ. ಐ.ಎಸ್.ಪಾಟೀಲ, ಪ್ರೊ.ಅಶ್ವಿನಿ ಅರಳಿ, ಪ್ರೊ.ಮಧುಸೂದನ ಕುಲಕರ್ಣಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ.ಲೋಹಿತ್, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನಿಲ ಪಾಟೀಲ, ಪ್ರೊ. ವೀರೇಶ ಮಾಗಳದ, ಪ್ರೊ.ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಶಶಿಧರಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT