ಗುರುವಾರ , ಸೆಪ್ಟೆಂಬರ್ 23, 2021
21 °C

ಪಟ್ಚಣ ಪಂಚಾಯಿತಿ ಉಪ ಚುನಾವಣೆ: ಕಾಂಗ್ರೆಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಗುಂದ: ಪಟ್ಟಣ ಪಂಚಾಯ್ತಿ ವಾರ್ಡ್‌ ಸಂಖ್ಯೆ 18ರ ಉಪ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೊನ್ನಪ್ಪ ಹಳ್ಳಿ 414 ಮತಗಳ ಅಂತರದಿಂದ ಜಯಗಳಿಸಿದ್ದಾರೆ.   

ಸೆ.3ರಂದು ನಡೆದ ಪಟ್ಟಣ ಪಂಚಾಯ್ತಿ ಉಪ ಚುನಾವಣೆಯಲ್ಲಿ 772 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಹೊನ್ನಪ್ಪ ಹಳ್ಳಿ 589, ಬಿಜೆಪಿ ಅಭ್ಯರ್ಥಿ ಸಿದ್ದಪ್ಪ ವಡ್ಡರ 175 ಮತ ಪಡೆದಿದ್ದು, 8 ನೋಟಾ ಮತ ಚಲಾವಣೆ ಆಗಿವೆ.

ಕಾಂಗ್ರೆಸ್ ವಿಜಯೋತ್ಸವ: ಪಟ್ಟಣ ಪಂಚಾಯ್ತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೊನ್ನಪ್ಪ ಹಳ್ಳಿ ಗೆಲವು ಸಾಧಿಸಿದ ಕಾರಣದ ಪಟ್ಟಣದ ಗಾಂಧಿಕಟ್ಟೆ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ, ಮುಖಂಡರಾದ ಎಸ್.ಎಂ.ನೀಲಗುಂದ, ಎಂ.ಡಿ.ಬಟ್ಟೂರ, ಬಿ.ಎಂ.ವಾಲಿ, ಕೆ.ಎಲ್.ಕರಿಗೌಡ್ರ, ವಿಜಯ ನೀಲಗುಂದ, ಎನ್.ಆರ್.ದೇಶಪಾಂಡೆ, ಅಶೋಕ ಹುಣಸಿಮರದ, ಖಾನಸಾಬ ಲಾಡಮ್ಮನವರ, ಎ.ಡಿ.ಮುಜಾವರ, ಎಸ್.ಸಿ.ಬಡ್ನಿ, ಹೊನ್ನಪ್ಪ ಜೋಗಿ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು