ನರೇಗಲ್: ‘ಸ್ವಾರ್ಥದ ಬದುಕಿನಿಂದ ಹೊರಬಂದು ಭೇದಭಾವ ಮರೆತು ಮೇಲು ಕೀಳುಗೈಯದೆ ನಾವೆಲ್ಲರೂ ಒಂದೇ ಎಂಬ ಪರಿಸರ ಹುಟ್ಟು ಹಾಕಿದರೆ ಮಾತ್ರ ವ್ಯಕ್ತಿಗಳ ಕಲ್ಯಾಣ ಸಾಧ್ಯ. ಎಲ್ಲರೂ ಈ ದಿಶೆಯಲ್ಲಿ ಸಾಗಬೇಕಾದರೆ ಇಂತಹ ಶಿವಾನುಭವ ಕಾರ್ಯಕ್ರಮಗಳಲ್ಲಿ ಸ್ವಪ್ರೇರಣೆಯಿಂದ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು’ ಎಂದು ಗಜೇಂದ್ರಗಡದ ಹಜರತ್ ಸೈಯ್ಯದ್ ನಿಜಾಮುದ್ದೀನ್ ಷಾ ಅರ್ಷಪಿ ಟಕೇದ ಭಾವಾನ ಹೇಳಿದರು.

ನರೇಗಲ್ ಸಮೀಪದ ನಿಡಗುಂದಿ ಗ್ರಾಮದ ಕುಮಾರೇಶ್ವರ ಬಿಲ್ವ ಪತ್ರೆ ವನದಲ್ಲಿ ಬುಧವಾರ ನಡೆದ ಶಿವಾನುಭವ ಸಂಪದ-14 ರ ಕಾರ್ಯಕ್ರಮದಲ್ಲಿ ʼಭಾವೈಕ್ಯʼ ಕುರಿತು ಉಪನ್ಯಾಸ ನೀಡಿದರು.

ಮಹೋನ್ನತ್ತ ವಿಶಿಷ್ಠ ವ್ಯಕ್ತಿವುಳ್ಳ ಬಸವಾದಿ ಶಿವಶರಣರು ವಿಶ್ವ ಕಲ್ಯಾಣಕ್ಕೆ ಪೂರಕವಾದ ವಿಚಾರಧಾರೆಗಳನ್ನು ವಚನ ಸಾಹಿತ್ಯದಲ್ಲಿ ಹುದುಗಿಸಿದ್ದು ಭಾವೈಕ್ಯ, ವಿವಿಧತೆಯಲ್ಲಿ ಏಕತೆ ಸಾಮರಸ್ಯ ಭಾವ ಬಿಂಬಿಸುತ್ತಲಿದೆ. ಎಂದೆಂದಿಗೂ ಅಜರಾಮರ ವ್ಯಕ್ತಿತ್ವವುಳ್ಳವರನ್ನಾಗಿ ಸಾಮಾನ್ಯರನ್ನು ಪರಿವರ್ತಿಸುವಂತಿದ್ದು ಆ ಅಮೂಲ್ಯ ತತ್ವಗಳನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು.

ಜಗತ್ತು ಇಂದು ಜಂಜಡಕ್ಕೆ ಸಿಲುಕಿದೆ. ಜನರು ತರೆಗಲೆಗಳಂತೆ ಮಾನಸಿಕ ದ್ವಂದಗಳಿಗೆ ಸಿಲುಕಿದ್ದಾರೆ. ನೆಮ್ಮದಿ, ಶಾಂತಿ ಸಿಗುತ್ತಿಲ್ಲ. ಬದುಕು ಜರ್ಜರಿತವಾಗಿದೆ. ನಂಬಿಕೆ ಹೊರಟುಹೋಗಿದೆ. ಹಣದ ದಾಹ ಮಿತಿ ಮೀರಿದೆ. ಇದಕ್ಕೆಲ್ಲ ಪರಿಹಾರ ಧರ್ಮದಲ್ಲಿದೆ. ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಜೀವನದಲ್ಲಿ ಬರುವ ಸುಖ, ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಸಮಸ್ಯೆಗಳಿಗೆ ಹೆದರದೇ ಅವುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ದೇವಸ್ಥಾನ, ಮಠ, ಮಂದಿರಗಳು ಧಾರ್ಮಿಕ ಕೇಂದ್ರಗಳು. ಮನುಷ್ಯನಿಗೆ ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳಾಗಿವೆ. ಇದರ ಅಭಿವೃದ್ದಿಗೆ ಶ್ರಮಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ಕೆಲಸ ಆಗಬೇಕು ಶೀವಾನುಭವ ಸಂಪದ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದರು.

ಈ ವೇಳೆ ನರೇಗಲ್ನ ವೈದ್ಯ ಡಾ. ಕೆ. ಬಿ ಧನ್ನೂರ ದಂಪತಿಗಳನ್ನು ಸನ್ಮಾನಿಸಲಾಯಿತು. ಇಟಗಿ-ನಿಡಗುಂದಿಯ ಧರ್ಮರ ಮಠದ ಷಣ್ಮುಖಪ್ಪಜ್ಜ ಧರ್ಮರಮಠ ಸಮ್ಮುಖ ವಹಿಸಿದ್ದರು. ಆರ್. ಕೆ. ಗಚ್ಚಿನಮಠ, ಅಂದಪ್ಪ ಬಿಚ್ಚೂರ, ಶರಣಯ್ಯ ಮಠಪತಿ, ಶರಣಪ್ಪ ಅರಮನಿ, ಬಸವರಾಜ ಜಂಗಣ್ಣವರ, ಚೇತನ ಅಣಗೌಡ್ರ, ಎ. ಎಸ್. ಗೆದಗೇರಿ, ಡಿ. ಎಸ್. ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.