ನಿರಂತರ ಮಳೆಯಿಂದಾಗಿ ಬಿತ್ತನೆ ಮಾಡಿದ ಬೆಳಗಳು ಹಾಳಾಗುತ್ತಿವೆ. ರೈತರಿಗೆ ಯೂರಿಯಾ ಗೊಬ್ಬರ ಅಗತ್ಯವಿದೆ. ಸ್ಥಳೀಯ ಅಗ್ರೋ ಸೆಂಟರ್‌ಗಳಲ್ಲಿ ಅಗತ್ಯವಿರುವ ಗೊಬ್ಬರ ಲಭಿಸದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೊಣ್ಣೂರು ಗ್ರಾಮದಲ್ಲಿ ಗೊಬ್ಬರವಿದ್ದರೂ ನೀಡುತ್ತಿಲ್ಲ ಎಂದು ಕೃಷಿ ಅಧಿಕಾರಿಗಳ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು.
ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಕುಲಕರ್ಣಿ ಮಾತನಾಡಿ, ‘ಗುರುವಾರ 125 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಿದೆ. ಶುಕ್ರವಾರ 50 ಮೆಟ್ರಿಕ್ ಟನ್ ಪೂರೈಕೆಯಾಗುತ್ತದೆ’ ಎಂದರು.