ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮುಂಡರಗಿ: ಪುನಃಶ್ಚೇತನಕ್ಕೆ ಕಾಯ್ದಿರುವ ಪುನರ್ವಸತಿ ಗ್ರಾಮಗಳು

ಬಿದರಳ್ಳಿ, ಗುಮ್ಮಗೋಳ, ವಿಠಲಾಪುರ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ; ಸ್ಥಳಾಂತರಕ್ಕೆ ಹಿಂದೇಟು
Published : 22 ಏಪ್ರಿಲ್ 2024, 8:04 IST
Last Updated : 22 ಏಪ್ರಿಲ್ 2024, 8:04 IST
ಫಾಲೋ ಮಾಡಿ
Comments
ಮೂಲ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಬೃಹತ್‌ ಗಿಡ ಗಂಟೆಗಳಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ಹೊಸ ಗುಮ್ಮಗೋಳ ಗ್ರಾಮ
ಮೂಲ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಬೃಹತ್‌ ಗಿಡ ಗಂಟೆಗಳಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ಹೊಸ ಗುಮ್ಮಗೋಳ ಗ್ರಾಮ
ಮನೆಗಳಿಲ್ಲದ್ದರಿಂದ ನೀರಾವರಿ ಇಲಾಖೆಯ ಕಟ್ಟಡಗಳಲ್ಲಿ ವಾಸಿಸುತ್ತಿರುವ ಮುಂಡರಗಿ ತಾಲ್ಲೂಕಿನ ಹಳೆಶಿಂಗಟಾಲೂರ ಗ್ರಾಮದ ಪ್ರವಾಹ ಪೀಡಿತ ಕುಟುಂಬಗಳು
ಮನೆಗಳಿಲ್ಲದ್ದರಿಂದ ನೀರಾವರಿ ಇಲಾಖೆಯ ಕಟ್ಟಡಗಳಲ್ಲಿ ವಾಸಿಸುತ್ತಿರುವ ಮುಂಡರಗಿ ತಾಲ್ಲೂಕಿನ ಹಳೆಶಿಂಗಟಾಲೂರ ಗ್ರಾಮದ ಪ್ರವಾಹ ಪೀಡಿತ ಕುಟುಂಬಗಳು
ಮೂಲಸೌಲಭ್ಯಗಳನ್ನು ಒದಗಿಸದೆ ನೀರಾವರಿ ಇಲಾಖೆಯವರು ಗ್ರಾಮಸ್ಥರನ್ನು ನೂತನ ಬಿದರಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ವಾಸಿಸುತ್ತಿರುವವರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ತಕ್ಷಣವೇ ನೂತನ ಬಿದರಳ್ಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು
ನಾಗರಾಜ ಮತ್ತೂರು ಬಿದರಳ್ಳಿ ಗ್ರಾಮಸ್ಥ
ನೂತನ ಗುಮ್ಮಗೋಳ ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲವಾದ್ದರಿಂದ ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ನೂತನ ಗ್ರಾಮವನ್ನು ಪುನರ್ ನಿರ್ಮಿಸಬೇಕು
ಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮಸ್ಥ
ಪ್ರವಾಹ ಪೀಡಿತ ಹಳೆಶಿಂಗಟಾಲೂರ ಗ್ರಾಮದ ಕೆಲವು ಕುಟುಂಬಗಳು ಹಲವು ವರ್ಷಗಳಿಂದ ಮನೆಗಳಿಲ್ಲದೆ ಸರ್ಕಾರಿ ಕಟ್ಟಡಗಳಲ್ಲಿ ವಾಸಿಸುತ್ತಿವೆ. ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಜನತಾ ದರ್ಶನ ಸೇರಿದಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಪ್ರವಾಹ ಪೀಡಿತರಿಗೆ ಮನೆಗಳು ಸಿಕ್ಕಿಲ್ಲ
ಬಸವೇಶ್ವರಕುಮಾರ ಸದಾಶಿವಪ್ಪನವರ ಪ್ರವಾಹ ಪೀಡಿತ ಹಳೆಶಿಂಗಟಾಲೂರ ಗ್ರಾಮಸ್ಥ
ಇದ್ದೂ ಇಲ್ಲದಂತಾದ ಯೋಜನೆ
ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಮುಂಡರಗಿ ಹಾಗೂ ಹೂವಿನಹಡಗಲಿ ತಾಲ್ಲೂಕುಗಳ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸದೇ ಇರುವುದರಿಂದ ನೀರಾವರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಇಲ್ಲಿಯ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ನೀರಾವರಿ ಯೋಜನೆಯು ರೈತರಿಗೆ ಇದ್ದೂ ಇಲ್ಲದಂತಾಗಿದೆ. ನೀರಾವರಿ ಯೋಜನೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಗದಗ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಬದುಕು ಇಷ್ಟೊತ್ತಿಗಾಗಲೇ ಬಂಗಾರವಾಗುತ್ತಿತ್ತು. ಆದರೆ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ತಾಲ್ಲೂಕಿನ ಬಿದರಳ್ಳಿ ಗುಮ್ಮಗೋಳ ಹಾಗೂ ವಿಠಲಾಪುರ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸದೆ ಇರುವುದರಿಂದ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ಬಾರದಂತಾಗಿದೆ. ಈ ಕಾರಣದಿಂದ ನೀರಾವರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ದೇವಸ್ಥಾನ ಸ್ಥಳಾಂತರಕ್ಕೆ ಆಗ್ರಹ
ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಪ್ರಾಚೀನವಾದ ಹಾಗೂ ಅದ್ಭುತ ಶಿಲ್ಪಕಲಾ ವೈಭವವನ್ನು ಹೊಂದಿರುವ ಗೋಣಿಬಸವೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಲಿದೆ. ಇದು ತುಂಬಾ ಅಪರೂಪದ ದೇವಸ್ಥಾನವಾಗಿದ್ದು ಅದನ್ನು ಯಥಾವತ್ತಾಗಿ ನೂತನ ಗ್ರಾಮಕ್ಕೆ ಸ್ಥಳಾಂತರಿಸಬೇಕು ಅಥವಾ ಅದನ್ನು ನೀರಿನಿಂದ ಸಂರಕ್ಷಿಸಿಕೊಳ್ಳಲು ಬೃಹತ್ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ಗುಮ್ಮಗೋಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮುಳುಗಡೆಯಾಗಲಿರುವ ಬಿದರಳ್ಳಿ ಗ್ರಾಮದಲ್ಲಿ ಪ್ರಾಚೀನವಾದ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನವು ತುಂಗಭದ್ರಾ ನದಿ ದಂಡೆಯ ಮೇಲಿದೆ. ಬ್ಯಾರೇಜಿನಲ್ಲಿ ಪೂರ್ಣಪ್ರಮಾಣದ ನೀರು ಸಂಗ್ರಹಿಸಿದರೆ ದೇವಸ್ಥಾನ ಮುಳುಗಡೆಯಾಗಲಿದೆ. ಆದ್ದರಿಂದ ಅದನ್ನು ಕೂಡಲಸಂಗಮ ಮಾದರಿಯಲ್ಲಿ ತಡೆಗೋಡೆಯನ್ನು ನಿರ್ಮಿಸಿ ದೇವಸ್ಥಾನವನ್ನು ಸಂರಕ್ಷಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.
‘ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಲಿ’
ಸರ್ಕಾರದ ನಿಯಮಾನುಸಾರ ಸ್ಥಳಾಂತರಿತ ನೂತನ ಗ್ರಾಮಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ನೂತನ ಬಿದರಳ್ಳಿ ಗ್ರಾಮದಲ್ಲಿ ಶೇ 75ರಷ್ಟು ಜನರು ಈಗಾಗಲೇ ಸ್ಥಳಾಂತರಗೊಂಡಿದ್ದು ಇನ್ನು ಸ್ವಲ್ಪ ಜನರು ಸ್ಥಳಾಂತರಗೊಳ್ಳಬೆಕಿದೆ. ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ನೂತನ ಗುಮ್ಮಗೋಳ ಗ್ರಾಮಕ್ಕೆ 2007ರಲ್ಲಿ ಎಲ್ಲ ಅಗತ್ಯ ಸೌಲಭ್ಯಗಳೊಂದಿಗೆ ನಿವೇಶನಗಳನ್ನು ವಿತರಿಸಲಾಗಿತ್ತು. ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕಿದರು. ಹೀಗಾಗಿ ನೂತನ ಗುಮ್ಮಗೋಳ ಗ್ರಾಮವು ಗಿಡ ಗಂಟೆಗಳಿಂದ ಆವೃತ್ತವಾಯಿತು. ಮುಂದೆ ಹಲವು ಬಾರಿ ಗಿಡ ಗಂಟೆಗಳನ್ನು ತೆರವುಗೊಳಿಸಿ ಕೊಡಲಾಯಿತು. ಗ್ರಾಮಸ್ಥರು ನೂತನ ಗ್ರಾಮದಲ್ಲಿ ವಾಸಿಸತೊಡಗಿದರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ನಿರ್ವಹಣೆಗೆ ಅನಕೂಲವಾಗಲಿದೆ. ಜನರು ಸ್ಥಳಾಂತರಗೊಂಡರೆ ಅದೊಂದು ಸುಂದರ ಗ್ರಾಮವಾಗಲಿದೆ. ಗ್ರಾಮಸ್ಥರು ಮನಸ್ಸು ಮಾಡಿ ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಬೇಕು. -ವಿ.ಎಂ.ವಿನಯಕುಮಾರ ಎಡಬ್ಲ್ಯು ನೀರಾವರಿ ಇಲಾಖೆ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT