ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಗುಂದ: ಹೆಸರು ಬೆಳೆಗೆ ಎಲಿಚುಕ್ಕಿ, ಬೂದಿ ರೋಗ

ಇಳುವರಿ ಕುಂಟಿತ: ಆತಂಕದಲ್ಲಿ ರೈತ
Published 12 ಆಗಸ್ಟ್ 2024, 15:58 IST
Last Updated 12 ಆಗಸ್ಟ್ 2024, 15:58 IST
ಅಕ್ಷರ ಗಾತ್ರ

ಮುಳಗುಂದ: ಪಟ್ಟಣ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆದ ಹೆಸರಿಗೆ ಎಲೆ ಚುಕ್ಕಿಬೂದಿ ರೋಗ ತಗುಲಿದ್ದು, ಶೇ.90ರಷ್ಟು ಇಳುವರಿ ಕುಂಟಿತವಾಗುವ ಆತಂಕ ರೈತರಿಗೆ ಎದರಾಗಿದೆ.

ಬಿತ್ತನೆ ಮಾಡಿದ ಒಂದು ವಾರದ ನಂತರ ನಿರಂತರ ಮಳೆ ಸುರಿದ ಪರಿಣಾಮ ಬೆಳೆಗಳು ಉತ್ತಮವಾಗಿದ್ದವು, ಸಮೃದ್ದವಾಗಿ ಹೂ ಬಿಟ್ಟು ಗಿಡತುಂಬ ಕಾಯಿ ಕಟ್ಟಿದ್ದವು. ಆದರೆ ಕಳೆದ ನಾಲ್ಕು ದಿನಗಳಿಂದ ಹೆಸರು ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕಿ ಬಿದ್ದಿದ್ದು, ಬೂದಿ ರೋಗ ಆವರಿಸಿಕೊಡಿದೆ. ಇದರಿಂದ ಗಿಡದ ಎಲೆಗಳು ಒಣಗಿ ಉದುರುತ್ತಿವೆ.

15 ದಿನಗಳಲ್ಲಿ ಕಟಾವಿಗೆ ಬರುವ ಹೊತ್ತಿಗೆ ಈ ರೋಗ ಕಾಣಿಸಿಕೊಂಡಿದ್ದು, ಬೆಳವಣಿಗೆ ಕುಂಟಿತವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಆತಂಕ ಮೂಡಿದೆ.
ಈ ಬಾರಿ ಹೆಸರು ಬಂಪರ ಬೆಳೆ ನಿರೀಕ್ಷೆ ಮಾಡಿದ್ದ ರೈತರಿಗೆ ಎಲೆಚುಕ್ಕಿ, ಬೂದಿ ರೋಗ ನಿರಾಶೆ ಮೂಡಿಸಿದೆ.

‘ಬೀಜ ಬಿತ್ತನೆ, ರಸಗೊಬ್ಬರ, ಎಡೆ ಖರ್ಚು ಸೇರಿ ಪ್ರತಿ ಎಕರೆಗೆ ₹15 ಸಾವಿರ ವೆಚ್ಚ ಮಾಡಲಾಗಿದೆ.  ಕಟಾವಿಗೆ ಬಂದ ಬೆಳೆ ರೋಗದಿಂದಾಗಿ ಹಾಳಾಗುತ್ತಿದೆ’ ಎಂದು ರೈತ ಪ್ರಭು ಕೋರಿ ಹೇಳಿದರು.

‘14 ಎಕರೆ ಹೊಲದಲ್ಲಿ ಹೆಸರು ಬೆಳೆ ಉತ್ತಮವಾಗಿತ್ತು, ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಈ ರೋಗ ಕಾಣಿಸಿಕೊಂಡಿದೆ. ಇಳುವರಿ ಕಡಿಮೆ ಆಗುವ ಭೀತಿ ಇದೆ. ಕೊಡಲೆ ಕೃಷಿ ಇಲಾಖೆ ಈ ಭಾಗದ ಹೆಸರು ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಬೆಳೆ ನಷ್ಟ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಜೀವ ನೀಲಗುಂದ ಆಗ್ರಹಿಸಿದರು.

‘ಮಳೆ ಹೆಚ್ಚಳದಿಂದ ಬೆಳೆ ಹಾನಿ’

‘ಹೆಸರು ಬೆಳೆಗೆ ಈ ಬಾರಿ ಸೂಕ್ತ ವಾತಾವರಣವಿರಲಿಲ್ಲ ಗದಗ ಜಿಲ್ಲೆಯಲ್ಲೆ ಕಡಿಮೆ ಮಳೆಯಾದ ಕೆಲ ಭಾಗಗಳಲ್ಲಿ ಹೆಸರು ಉತ್ತಮವಾಗಿದೆ. ಇಳುವರಿ ಕಡಿಮೆ ಬಂದಿದೆ. ಗದಗ ತಾಲ್ಲೂಕಿನ ಮುಳಗುಂದ ಕುರ್ತಕೋಟಿ ಹುಲಕೋಟಿ ಹೊಸಳ್ಳಿ ಚಿಂಚಲಿ ಕಲ್ಲೂರ ಸೇರಿದಂತೆ ಮಳೆ ಹೆಚ್ಚಾದ ಭಾಗಗಳಲ್ಲಿ ಹೆಸರು ಬೆಳೆಗೆ ಸರ್ಕೋಸಪರ್‌ (ಎಲೆ ಚುಕ್ಕಿ) ಚಿಬ್ಬು ರೋಗ ಬೂದಿ ರೋಗ ಆವರಿಸಿದ್ದು ಈ ರೋಗ ಗಾಳಿ ಮೂಲಕ ಅತಿ ವೇಗವಾಗಿ ಹರಡುತ್ತದೆ. ರೋಗ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ ಎಂದು ಬೆಳವಟಗಿಯ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ.ಸಿ.ಎಂ.ರಫೀ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT