ನರಗುಂದ: ತಾಲ್ಲೂಕಿನ ಗುರ್ಲಕಟ್ಟಿ ಗ್ರಾಮದ ಅಮೃತ ಸರೋವರ ದಂಡೆಯ ಮೇಲೆ ಈಚೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು.

‘ನರೇಗಾ ಯೋಜನೆಯಡಿ ನಿರ್ಮಿಸಲಾದ ಅಮೃತ ಸರೋವರದ ಮೇಲೆ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಉತ್ತಮ ಆರೋಗ್ಯ ಮತ್ತು ಪರಿಸರ, ಜಲ ಮೂಲಗಳ ಸಂರಕ್ಷಣೆಯ ಮಹತ್ವ ತಿಳಿಸಲಾಗುತ್ತಿದೆ. ಪ್ರತಿಯೊಬ್ಬರು ಪ್ರತಿದಿನ ಅರ್ಧಗಂಟೆ ಸಮಯ ಯೋಗಾಭ್ಯಾಸ ಮಾಡಬೇಕು’ ಎಂದು ಎಸ್.ಕೆ. ಇನಾಮದಾರ ಹೇಳಿದರು.

ಪಿಡಿಒ ಕೃಷ್ಣಮ್ಮ ಹಾದಿಮನಿ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ಕಾರ್ಯದರ್ಶಿ ಕೆ.ಬಿ. ಮಾದರ, ಮುಖ್ಯ ಶಿಕ್ಷಕ.ಆರ್.ಹೆಚ್. ಹಾನಾಪೂರ, ಶಿಕ್ಷಕರಾದ ಎಸ್.ಎನ್. ಬೋಸ್ಲೆ, ಎಸ್.ಬಿ. ಪೂಜಾರಿ, ಮಂಜುನಾಥ ಹೂಗಾರ ಹಾಗೂ ಪಂಚಾಯಿತಿ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.