ಗದಗ: ‘ಯುವಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ; ಅದು ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮ್ಹಾನ್ಸ್, ನೆಹರೂ ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಲಯನ್ಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ 2025ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆ ಹೆಚ್ಚಿಸುವುದರ ಮೂಲಕ ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಇದನ್ನು ಸಾರ್ಥಕಪಡಿಸುವಲ್ಲಿ ಯುವ ಸಬಲೀಕರಣ ಇಲಾಖೆ ಪ್ರಯತ್ನ ಮಾಡಬೇಕು’ ಎಂದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾ ಘಟಕ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ‘ಯುವ ಕಲಾವಿದರಿಗೆ ಸೂಕ್ತ ಗೌರವ, ಪ್ರಶಸ್ತಿಗಳನ್ನು ದೊರಕಿಸಿ ಕೊಡುವಲ್ಲಿ ಸಚಿವರ ಸಹಾಯ ಅಪೇಕ್ಷಿಸುವುದರ ಜತೆಗೆ ಅವರ ಮಾರ್ಗದರ್ಶನ ಅತ್ಯಂತ ಅಗತ್ಯ. ಆ ರೀತಿಯ ಸಹಾಯ, ಸಹಕಾರ ಯಾವತ್ತಿಗೂ ಇರಲಿ’ ಎಂದು ಮನವಿ ಮಾಡಿದರು.

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಲಯನ್ಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೆ.ಸಿ. ಶಿರೋಳ, ಸಿದ್ದು ಪಾಟೀಲ, ಸಾವಿತ್ರಿ ಲಮಾಣಿ, ಶಂಕ್ರಣ್ಣ ಸಂಕಣ್ಣನವರ ಇದ್ದರು.

ಗಣ್ಯರಾದ ರಾಜೇಶ ಕುಲಕರ್ಣಿ, ಎಂ.ಸಿ. ಹಿರೇಮಠ, ಪ್ರೇಮಾನಂದ ರೋಣದ, ಸಯ್ಯದ್ ಮತೀನ್ ಮುಲ್ಲಾ, ರೋಹಿತ್ ಒಡೆಯರ್, ರಾಹುಲ್ ಒಡೆಯರ್, ಪುನೀತ ದೇಶಪಾಂಡೆ, ಜಿ.ಬಿ. ಬೇವಿನಕಟ್ಟಿ, ರಾಜು ವರ್ಣೆಕರ, ರೇಣಕಾಪ್ರಸಾದ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಂದಾನಯ್ಯ ವಿಭೂತಿ, ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ, ಹಬೀಬ್ ಇದ್ದರು.

ಮಹಮ್ಮದ್ ರಫೀ ಯರಗುಡಿ ಕಾರ್ಯಕ್ರಮ ನಿರೂಪಿಸಿದರು. ಶರಣು ಗೋಗೇರಿ ಸ್ವಾಗತಿಸಿದರು. ಪ್ರೊ. ಹೇಮಂತ ದಳವಾಯಿ ವಂದಿಸಿದರು.

ಯುವಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಸನ್ಮಾರ್ಗದಲ್ಲಿ ನಡೆದಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ಸ್ಪರ್ಧಾಳುಗಳು ತಮ್ಮ ವಿಭಾಗಗಳಲ್ಲಿ ಯಶಸ್ಸು ಪಡೆಯಿರಿ
ಎಚ್.ಕೆ.ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.