ಬುಧವಾರ, ಜೂನ್ 23, 2021
28 °C
ಮೂವರ ಸಾವು, ಸೋಂಕಿತರ ಸಂಖ್ಯೆ 4571ಕ್ಕೆ ಏರಿಕೆ

ಹಾಸನ: ಒಂದೇ ದಿನ 309 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಒಂದೇ ದಿನ 309 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಈವರೆಗೆ ಚೇತರಿಸಿಕೊಂಡವರ
ಸಂಖ್ಯೆ2,762 ತಲುಪಿದೆ.

ಹೊಸದಾಗಿ 145 ಜನರಿಗೆ ಕೋವಿಡ್‌ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4571ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ 70 ವರ್ಷದ ವೃದ್ಧೆ, ಹಾಸನ ತಾಲ್ಲೂಕಿನ 66
ವರ್ಷದ ವೃದ್ಧ, ಅರಸೀಕೆರೆ ತಾಲ್ಲೂಕಿನ 14 ವರ್ಷದ ಬಾಲಕ ಮೃತಪಟ್ಟಿದ್ದಾರೆ. 1682 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆ, ಕೋವಿಡ್‍ ಕೇರ್‍ ಸೆಂಟರ್‍ ಹಾಗೂ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 54 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ತಿಳಿಸಿದರು.

ಹೊಸದಾಗಿ ಅರಸೀಕೆರೆ 51, ಚನ್ನರಾಯಪಟ್ಟಣ 7, ಆಲೂರು 4, ಹಾಸನ 55, ಹೊಳೆನರಸೀಪುರ 15, ಅರಕಲಗೂಡು 3, ಬೇಲೂರು 6 ಹಾಗೂ ಸಕಲೇಶಪುರ ತಾಲ್ಲೂಕಿನ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ, ಶೀತ ಜ್ವರ ಮಾದರಿ ಅನಾರೋಗ್ಯ, ಅನ್ಯ ಜಿಲ್ಲೆ ಪ್ರಯಾಣ ಇತಿಹಾಸ ಹೊಂದಿರುವವರಿಗೆ ಸೋಂಕು ತಗುಲಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು