ಶನಿವಾರ, ಜನವರಿ 22, 2022
16 °C

ಹಾಸನ: ವಿಧಾನ ಪರಿಷತ್‌ ಚುನಾವಣೆ ಕಣದಲ್ಲಿ ಉಳಿದ 4 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ವಿಧಾನ ಪರಿಷತ್‌ ಚುನಾವಣೆ ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವು ಶುಕ್ರವಾರ ಕೊನೆಗೊಂಡಿದ್ದು, ಅಂತಿಮವಾಗಿ ನಾಲ್ವರು  ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಎಂ.ಶಂಕರ್‌, ಬಿಜೆಪಿಯ ಎಚ್.ಎಂ.ವಿಶ್ವನಾಥ್‌, ಜೆಡಿಎಸ್‌ನ ಆರ್‌.ಸೂರಜ್‌ ಹಾಗೂ ಪಕ್ಷೇತರ ಅಭ್ಯರ್ಥಿ ಎಚ್‌.ಡಿ.ರೇವಣ್ಣ ಪೈಕಿ ಯಾರೊಬ್ಬರೂ ಉಮೇದುವಾರಿಕೆ ಹಿಂಪಡೆಯಲಿಲ್ಲ.

ಈ ನಾಲ್ಕೂ ಮಂದಿ ನ.23ರಂದು ನಾಮಪತ್ರ ಸಲ್ಲಿಸಿದ್ದರು. 24ರಂದು ನಾಮಪತ್ರಗಳನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿಯು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು  ಘೋಷಿಸಿದ್ದರು. ಉಮೇದುವಾರಿಕೆ ಹಿಂಪಡೆಯಲು ಎರಡು ದಿನ ಕಾಲಾವಕಾಶ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು