ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ: ಸಚಿವ ಅಶ್ವತ್ಥ ನಾರಾಯಣ

ಲಕ್ಷಾಂತರ ಜನರಿಗೆ ಅಪ್ರೆಂಟಿಸ್ ತರಬೇತಿಗೆ ವ್ಯವಸ್ಥೆ
Last Updated 26 ಏಪ್ರಿಲ್ 2022, 15:38 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯದ ಅಸಂಘಟಿತ ವಲಯದಲ್ಲಿಮುಂದಿನ ಐದು ವರ್ಷದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಐಟಿ, ಬಿಟಿ ಮತ್ತುಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿಮಂಗಳವಾರ ಕೌಶಲ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿದ ಅವರು ಮಾತನಾಡಿದರು.

‘ಮಾಹಿತಿ ತಂತ್ರಜ್ಞಾನ ವಲಯವೊಂದರಲ್ಲೇ ವರ್ಷಕ್ಕೆ 5 ಲಕ್ಷದಂತೆ ಒಟ್ಟು25 ಲಕ್ಷ ಉದ್ಯೋಗ ಅವಕಾಶ ಲಭ್ಯವಾಗಲಿದೆ. ಈ ಮೂಲಕ ಒಟ್ಟಾರೆ 55 ಲಕ್ಷಉದ್ಯೋಗ ಯುವಜನರಿಗೆ ಸಿಗಲಿವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲೇ ಸ್ಥಳೀಯವಾಗಿ 1,600 ಉದ್ಯೋಗ ಲಭ್ಯವಿದ್ದು,ಇವುಗಳನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳಬೇಕು. ಉಳಿದವರಿಗೆ ಅವರಕೌಶಲ ಆಧರಿಸಿ, ಉದ್ಯೋಗ ದೊರಕಿಸಿ ಕೊಡಲಾಗುವುದು’ ಎಂದು ಹೇಳಿದರು.

‘ಉದ್ಯಮ ವಲಯದಲ್ಲಿ ಕೌಶಲ ಪೂರ್ಣ ಮಾನವ ಸಂಪನ್ಮೂಲಕ್ಕೆ ಭಾರಿ ಬೇಡಿಕೆಇದ್ದು, ಮುಂದಿನ 5 ವರ್ಷದಲ್ಲಿ 55 ಲಕ್ಷ ಜನರನ್ನು ಸಜ್ಜುಗೊಳಿಸಬೇಕಾಗಿದೆ.ಮುಖ್ಯವಾಗಿ, ರಾಜ್ಯದ ಆರ್ಥಿಕತೆಯನ್ನು ನಾಲ್ಕು ಪಟ್ಟು ಹೆಚ್ಚು ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಪಾಲಿಟೆಕ್ನಿಕ್ ಶಿಕ್ಷಣದ ಸಮಗ್ರ ಸುಧಾರಣೆಗೆ ಸರ್ಕಾರ ಸಂಕಲ್ಪ ಮಾಡಿದ್ದು,150 ಸಂಸ್ಥೆಗಳನ್ನು ಸಮಗ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿಕಲಿಯುವವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಖಾತ್ರಿ ಒದಗಿಸಲಾಗುತ್ತಿದೆ. ಜತೆಗೆ, ಲಕ್ಷಾಂತರ ಜನರಿಗೆ ಅಪ್ರೆಂಟಿಸ್ ತರಬೇತಿ ಕೊಡಲು ಸಕಲವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳು ಇದರತ್ತ ಗಮನ ಹರಿಸಬೇಕು’ ಎಂದು ಸೂಚಿಸಿದರು.

‘ಶಿಕ್ಷಣದಲ್ಲಿ ಭಾಷೆ, ಗಣಿತದ ಕಲಿಕೆಯೇ ಕೌಶಲಪೂರ್ಣ ಜ್ಞಾನಾರ್ಜನೆಗೆಆಧಾರಸ್ತಂಭ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಇವುಗಳ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ತಂತ್ರಜ್ಞಾನದ ಮೂಲಕಪಾರದರ್ಶಕತೆ ತರಲಾಗಿದೆ. ಯುವಜನರು ಕೇವಲ ಉದ್ಯೋಗಾರ್ಥಿಗಳಾಗದೆಉದ್ಯೋಗದಾತರಾಗುವಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದು ಸಚಿವರು ನುಡಿದರು.

‘ಯುವಜನರುಉದ್ಯೋಗ ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ. ಅವರಿರುವ ಸ್ಥಳೀಯಪರಿಸರದಲ್ಲೇ ಅವಕಾಶ ಸೃಷ್ಟಿಸಲಾಗುವುದು. ಇದರಿಂದ ಅನಗತ್ಯವಲಸೆಯನ್ನೂ ತಡೆಯಬಹುದು’ ಎಂದು ಅಶ್ವತ್ಥನಾರಾಯಣ ಭರವಸೆನೀಡಿದರು.

ಶಾಸಕ ಪ್ರೀತಂಗೌಡ ಮಾತನಾಡಿ ‘ಎಲ್ಲರಿಗೂ ಉದ್ಯೋಗ ನೀಡಲುಆಗುವುದಿಲ್ಲ. ಮೇಳದಲ್ಲಿ ಉದ್ಯೋಗ ಸಿಗದವರು ನಿರಾಶರಾಗದೆ ನ್ಯೂನತೆ ಸರಿಪಡಿಸಿಕೊಂಡು ಮತ್ತೆ ಪ್ರಯತ್ನಿಸಬೇಕು’ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿದರು. ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ ಸ್ವಾಗತಿಸಿದರು. ಮಲೆನಾಡು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು, ಮಲೆನಾಡು ಶಿಕ್ಷಣ ಸಂಸ್ಥೆಯ ಆರ್.ಟಿ.ದ್ಯಾವೇಗೌಡ, ಚಂದ್ರಶೇಖರ್ ಅಯ್ಯರ್, ಜಗದೀಶ್, ಗುರುಮೂರ್ತಿ, ನಗರಸಭೆ ಅಧ್ಯಕ್ಷ ಆರ್.ಮೋಹನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT