ಸೋಮವಾರ, ಏಪ್ರಿಲ್ 12, 2021
25 °C

92 ಮಂದಿಗೆ ಕೊರೊನಾ ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 92 ಜನರಿಗೆ ಕೋವಿಡ್‌ 19 ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ
30,071 ಏರಿಕೆಯಾಗಿದೆ.

ಸೋಂಕಿನಿಂದಾಗಿ ಒಬ್ಬರು ಮೃತಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಒಟ್ಟು 478ಕ್ಕೆ ಏರಿಕೆಯಾಗಿದೆ. 743 ಸಕ್ರಿಯ ಪ್ರಕರಣಗಳ ಪೈಕಿ 8 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಬಿಡುಗಡೆಯಾದ 63 ಮಂದಿ ಸೇರಿದಂತೆ ಈವರೆಗೆ 28,850 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆಯಾಗಿದ್ದಾರೆ.

ಹೊಸದಾಗಿ ಹಾಸನ ತಾಲ್ಲೂಕಿನ 39 ಮಂದಿ, ಅರಸೀಕೆರೆ 8, ಚನ್ನರಾಯಪಟ್ಟಣ 23, ಬೇಲೂರು 3,
ಹೊಳೆನರಸೀಪುರ 6, ಆಲೂರು 1, ಸಕಲೇಶಪುರ 6, ಅರಕಲಗೂಡು 2 ಹಾಗೂ ಇತರೆ ಜಿಲ್ಲೆ 4 ಮಂದಿಗೆ
ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.