ಗುರುವಾರ , ಮೇ 6, 2021
22 °C

ಅರಸೀಕೆರೆ: ನರಸಪ್ಪನ ಗುಡ್ಡದ ಬಳಿ ಕರಡಿ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ (ಉಚ್ಚಂಗಿದುರ್ಗ): ಗ್ರಾಮದ ಹೊರವಲಯದ ನರಸಪ್ಪನ ಗುಡ್ಡದ ಬಳಿ ಸೋಮವಾರ ಸಂಜೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಕಾರ್ಮಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರವನ್ನು ಸೆರೆಹಿಡಿದಿದ್ದು ಹರಿಯಬಿಟ್ಟಿದ್ದಾರೆ.

ತಿಮಲಾಪುರದ ರೈತ ಮಂಜುನಾಥ್ ಜಮೀನಿನಲ್ಲಿ ನೀರು ಕಟ್ಟುತ್ತಿರುವ ವೇಳೆ ಹಿಂಬದಿಯಲ್ಲಿ ಕರಡಿ ಹೋಗಿದೆ. ಕ್ರಷರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಇದನ್ನು ಗಮನಿಸಿ ಎಚ್ಚೆತ್ತುಕೊಂಡ ಕಾರ್ಮಿಕರು ರೈತನ್ನು ಕೂಗಿ ಕರಡಿ ಬರುತ್ತಿರುವುದನ್ನು ತಿಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ರೈತ ಮಂಜುನಾಥ್ ಕಾರ್ಮಿಕರ ಕಡೆ ಓಡಿ ಬಂದು ಆತಂಕದಿಂದ ಪಾರಾಗಿದ್ದಾರೆ.

‘ಕಾರ್ಮಿಕರು ಕೂಗಿದ್ದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಆದರೂ ಆತಂಕದಿಂದ ಓಡಿ ಬಂದೆ. ಕಾರ್ಮಿಕರ ಸಹಾಯದಿಂದ ಅನಾಹುತ ತಪ್ಪಿದಂತಾಗಿದೆ' ಎಂದು ರೈತ ಮಂಜುನಾಥ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು