ಹಾಸನ: ಕಂಠ ಪೂರ್ತಿ ಮದ್ಯ ಸೇವಿಸಿ ವಾರದ ಹಿಂದೆ ಬಾರ್ ಒಂದರ ಎದುರು ಪುಂಡಾಟ ಪ್ರದರ್ಶಿಸಿದ್ದ
ನಾಲ್ವರನ್ನು ಬಡಾವಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕುವೆಂಪುನಗರ ಬಡಾವಣೆಯಲ್ಲಿ ಪೊಲೀಸ್ ಠಾಣೆ ಅನತಿ ದೂರದಲ್ಲಿರುವ ಜೆ.ಕೆ ಬಾರ್ ಆ್ಯಂಡ್
ರೆಸ್ಟೋರೆಂಟ್ ಬಳಿ ಯುವಕರ ಗುಂಪು ನಿಂತಿತ್ತು. ಅಲ್ಲಿಗೆ ಬಂದ ನಾಲ್ವರ ತಂಡ, ಯುವಕರ ಮೇಲೆ ಮುಗಿ ಬಿದ್ದಿತ್ತು. ಕೈಯಲ್ಲಿ ಮಚ್ಚು ಹಿಡಿದು ಗಲಾಟೆ ಮಾಡಿದರು. ಒಬ್ಬನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು.
ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಬಡಾವಣೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣರಾಜು, ರೌಡಿಸಂ ಮಾಡುತ್ತಿದ್ದ ಆಡುವಳ್ಳಿಯ ನಿತಿನ್ ಮತ್ತು ಚೇತನ್‍ನನ್ನು ಥಳಿಸಿ ವಶಕ್ಕೆ ಪಡೆದರು. ಇದಾದ ಬಳಿಕ ಗಲಾಟೆಯಲ್ಲಿ ಭಾಗಿಯಾಗಿದ್ದ ಸಚಿನ್ ಮತ್ತು ಮಧು ಎಂಬುವರನ್ನೂ ಬಂಧಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.