ಶ್ರವಣಬೆಳಗೊಳ: ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಲು ಮೈಸೂರಿಗೆ ಹೊರಟಿದ್ದ ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಡಿ.ಎಂ.ರವಿ ದಮ್ಮನಿಂಗಳ ಅವರನ್ನು ಸೋಮವಾರ ಬೆಳಗ್ಗೆ ಶ್ರವಣಬೆಳಗೊಳ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಪ್ರತಿಭಟನೆ ನಡೆಸುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಅರಿತ ಪೊಲೀಸರು, ರವಿ ಅವರ ಗ್ರಾಮವಾದ ದಮ್ಮನಿಂಗಳದಲ್ಲಿ ವಶಕ್ಕೆ ಪಡೆದು ಬಳಿಕ ಠಾಣೆಗೆ ಕರೆತಂದು ಎರಡು ಗಂಟೆಗಳಿಗೂ ಹೆಚ್ಚು ಕಾಲ ಠಾಣೆಯಲ್ಲಿ ಕುಳ್ಳರಿಸಿದ್ದಾರೆ.

ಇದನ್ನು ವಿರೋಧಿಸಿ ಬಿಜೆಪಿ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಅವರನ್ನು ಬಿಡುಗಡೆ ಮಾಡಿ ಕಳುಹಿಸಿದರು.

ಡಿ.ಎನ್.ರವಿ ಮಾತನಾಡಿ, ‘ದಸರಾ ಉದ್ಘಾಟನೆಗೆ ತೊಂದರೆ ನೀಡುತ್ತಾರೆ ಎನ್ನುವ ನೆಪವೊಡ್ಡಿ ಮನೆಯಲ್ಲಿ ಮಲಗಿದ್ದ ಹಿಂದೂ ಮುಖಂಡರನ್ನು ಸರ್ಕಾರ ಬಂಧಿಸುತ್ತಿರುವುದು ಅಮಾನವೀಯ’ ಎಂದು ಆರೋಪಿಸಿದರು.

‘ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಬಿಜೆಪಿ ಮುಖಂಡರನ್ನು, ಹಿಂದೂ ಹೋರಾಟಗಾರರನ್ನು ಬಂಧಿಸಿ ಭಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡಿಸುವ ಪ್ರಮೇಯ ಅವಶ್ಯಕತೆ ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲ. ಇದು ಖಂಡನೀಯ’ ಎಂದರು.

ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ ಮಾತನಾಡಿ, ‘ದಸರಾ ಮಹೋತ್ಸವಕ್ಕೆ ಬಿಜೆಪಿ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ಹೋಗುವುದನ್ನು ತಡೆಯುವ ನಡೆ ಖಂಡನೀಯ. ಇದಕ್ಕೆ ತಕ್ಕ ಉತ್ತರ ಕೊಡಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ರೂಪೇಶ್, ಮಂಜು ಗುರಿಗಾರನಹಳ್ಳಿ, ಕುಮಾರ್, ಸಾಗರ್ ಗೌಡ, ಮಂಜುನಾಥ್, ಚಂದ್ರರಾಜ್, ರಾಜೇಶ್, ಮಂಜು ಬೋವಿ, ಸ್ವಾಮಿ, ರಾಜೇಶ್, ನವೀನ್, ಸಣ್ಣಿ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.