ಹಳೇಬೀಡಿನ ಬಸ್ತಿಹಳ್ಳಿಯಲ್ಲಿ ಗುರುವಾರ ನಡೆದ ಕರಿಯಮ್ಮ ದೇವಿ ಕಲ್ಯಾಣ ಮಹೋತ್ಸವದಲ್ಲಿ ಮುತ್ತೈದೆಯರು ಭತ್ತ ಕುಟ್ಟುವ ಶಾಸ್ತ್ರ ನಡೆಸಿದರು
ಕರಿಯಮ್ಮ ದೇವಿಯನ್ನು ಸಂಭ್ರಮದಿಂದ ಕರೆ ತಂದ ಗ್ರಾಮಸ್ಥರು ಮದುವೆ ಚಪ್ಪರದಲ್ಲಿ ಮೊಳಗಿದ ಮಂತ್ರಘೋಷ, ಸೋಬಾನೆ ಹಾಡು ಮಕ್ಕಳಿಗೆ ವಿವಾಹ ಭಾಗ್ಯ ಕರುಣಿಸಿ ಎಂದು ಪ್ರಾರ್ಥಿಸಿದ ಪೋಷಕರು
ತಾತ ಮುತ್ತಾತನ ಕಾಲದಿಂದಲೂ ಗ್ರಾಮಸ್ಥರ ಸಹಕಾರದಿಂದ ನಮ್ಮ ಮನೆಯಿಂದ ದೇವಿ ವಿವಾಹ ನಡೆಸಿಕೊಂಡು ಬಂದಿದ್ದೇವೆ. ದೇವಿ ತವರು ಮನೆಯ ಜವಾಬ್ದಾರಿ ಹೆಮ್ಮೆ ಎನಿಸಿದೆ
ಗಣೇಶ್ ಬಸ್ತಿಹಳ್ಳಿ ಗ್ರಾಮಸ್ಥ
ವಯಸ್ಸಿಗೆ ಬಂದ ಮಕ್ಕಳಿಗೆ ಕಂಕಣ ಭಾಗ್ಯ ದೊರಕಲಿ. ಗ್ರಾಮಗಳು ಸಮೃದ್ಧಿಯಾಗಲಿ ಎಂದು ದೇವಿಯ ಕಲ್ಯಾಣ ಮಹೋತ್ಸವ ನಡೆಸುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ
ಪ್ರಮೋದ್ ಆರಾಧ್ಯ ಪುರೋಹಿತ
ಚಪ್ಪರದಲ್ಲಿ ವಿವಾಹ ಮಹೋತ್ಸವ
ಒಕ್ಕಲಿಗ ಗೌಡ ಸಮಾಜದವರು ಹಲವು ತಲೆಮಾರಿನಿಂದ ಜಾತ್ರೆ ಸಮಯದಲ್ಲಿ ದೇವಿಯ ವಿವಾಹ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ದೇವರಾಜ ಅವರ ಮನೆಯ ಮುಂಭಾಗ ತೆಂಗಿನ ಸೋಗೆಯ ದೊಡ್ಡ ಚಪ್ಪರ ಹಾಕಿ ಮಾವಿನ ತೋರಣ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಧಾರೆ ಮೂಹೂರ್ತಕ್ಕೆ ಬಾಳೆದಿಂಡಿನಿಂದ ಮಂಟಪ ನಿರ್ಮಿಸುತ್ತಾರೆ. ಸೋಗೆ ಚಪ್ಪರದ ಕೆಳಗೆ ಶಾಸ್ತ್ರೋಕ್ತವಾಗಿ ನಡೆಯುವ ದೇವಿಯ ವಿವಾಹ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸುತ್ತಾರೆ ಎಂದು ಗ್ರಾಮಸ್ಥರಾದ ಕೃಷ್ಣ ಹಾಗೂ ರವಿ ವಿವರಿಸಿದರು. ಪ್ರಮೋದ್ ಆರಾಧ್ಯ ಶಾಸ್ತ್ರಿ ವರು ದೇವಿ ವಿವಾಹದ ಪೌರೋಹಿತ್ಯ ನಡೆಸಿದರು. ಕರಿಯಮ್ಮ ದೇವಿ ಅರ್ಚಕ ಕಾರ್ತಿಕ್ ಸಹಕಾರ ನೀಡಿದರು.